ಶಿವಮೊಗ್ಗ: ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ಬಳಿಕ, ಮುಂದಿನ ತರಗತಿಗೆ ಶಾಲಾ ದಾಖಲಾತಿ ಆರಂಭಗೊಂಡಿದೆ. ಕೆಲ ಶಾಲೆಗಳಂತೂ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುತ್ತಿರೋ ಆರೋಪ ಕೇಳಿ ಬಂದಿದೆ. ಇಂತವರಿಗೆ ನಿಗದಿಗಿಂತ ಹೆಚ್ಚಿನ ಫೀಸ್ ತಗೊಂಡ್ರೆ ಶಾಲಾ ಮಾನ್ಯತೆಯನ್ನೇ ರದ್ದುಗೊಳಿಸೋದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದಂತ ಅವರು, ಖಾಸಗಿ ಶಾಲೆಗಳಿಗೆ ನಾನು ಒಂದು ಸಲಹೆ ಕೊಡುತ್ತೇನೆ. ಕಾನೂನಿನ ಪ್ರಕಾರವೇ ಶಾಲೆಯಲ್ಲಿ ಶುಲ್ಕ ತೆಗೆದುಕೊಳ್ಳಬೇಕು. ಈ ಮೂಲಕ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಖಾಸಗಿ ಶಾಲೆಗಳು ಸಹಾಯ ಮಾಡಬೇಕು. ಅದರ ಹೊರತಾಗಿ ಅಕ್ರಮವಾಗಿ ಫೀಸ್ ತೆಗೆದುಕೊಂಡ್ರೆ, ಹೆಚ್ಚಿನ ಶುಲ್ಕವನ್ನು ಮಕ್ಕಳ ಪೋಷಕರಿಂದ ವಸೂಲಿ ಮಾಡಿದ್ದೇ ಆದಲ್ಲಿ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಶಾಲಾ ಮಾನ್ಯತೆಯನ್ನು ರದ್ದುಗೊಳಿಸೋದಾಗಿ ಎಚ್ಚರಿಕೆ ನೀಡಿದರು.
ಅಕ್ರಮವಾಗಿ ಮಣ್ಣು ಸಾಗಿಸಿದ್ರೂ ಕಣ್ ಮುಚ್ಚಿ ಕುಳಿತ ‘ಕಾನ್ಲೆ ಪಿಡಿಓ’: ಸಾಗರ ತಹಶೀಲ್ದಾರರಿಗೆ ಗ್ರಾಮಸ್ಥರ ದೂರು
‘ತಾಯಿಯಾಗುವುದು’ ಸಹಜ ವಿದ್ಯಮಾನ : ಉದ್ಯೋಗಿಗೆ ಹೆರಿಗೆ ಬಾಕಿ ಪಾವತಿಸಲು ಕೋರ್ಟ್ ಆದೇಶ