ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ನಾವು ಪ್ರತಿದಿನ ಹಲವಾರು ಟ್ವೀಟ್ಗಳು ಮತ್ತು ಪೋಸ್ಟ್ಗಳನ್ನು ನೋಡುತ್ತೇವೆ, ಮತ್ತು ಅದು ವೈರಲ್ ಆಗುತ್ತವೆ ಕೂಡ. ಅದರಲ್ಲಿ ಕೆಲವು ಮಾತ್ರ ನಿಮ್ಮನ್ನು ನಗಿಸುತ್ತದೆ ಕೂಡ. ಈ ನಡುವೆ ಕಂಪ್ಯೂಟರ್ ನಲ್ಲಿ ಮುಂದೆ ಕುಳಿತು ಕೀಬೋರ್ಡ್ ಕೆಲಸ ಮಾಡುವ ನಮ್ಮಂತೆಯೇ ಸೊಳ್ಳೆಯೂ ಕೂಡ ಕೀಬೋರ್ಡ್ ನಲ್ಲಿ ಕೆಲಸ ಮಾಡಿರುವ ವಿಡಿಯೋವೊಂದು ಫೋಟೋ ವೈರಲ್ ಆಗಿದೆ.
ಮೇ 8 ರಂದು ಆನ್ಲೈನ್ನಲ್ಲಿ ಹಂಚಿಕೊಳ್ಳಲಾದ ಈ ಫೋಟೋ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ವೈರಲ್ ಆಗಿದೆ. ಇದು ನಿಸ್ಸಂದೇಹವಾಗಿ ಎಕ್ಸ್ ನಲ್ಲಿ 3.1 ಮಿಲಿಯನ್ ನೆಟ್ಟಿಗರ ಗಮನವನ್ನು ಸೆಳೆದಿದೆ. ಕೀ ಬೋರ್ಡ್ ನ “V” ಅಕ್ಷರದ ಮೇಲೆ ಸೊಳ್ಳೆ ಕುಳಿತಿದ್ದು ಟೈಪ್ ಮಾಡುತ್ತಿರುವಂತೆ ಭಾಸವಾಗಿದೆ ಈ ಫೋಟೋ.
the mosquito sending this tweet https://t.co/w4tG5yPrka pic.twitter.com/9d9rM8iAiU
— Bob (@emptytesticles) May 8, 2024