ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ನೀಡಲಾಗಿದ್ದಂತ ಎಸ್ಸಿ, ಎಸ್ಟಿ ಸಮುದಾಯದ ವಿವಾದಾತ್ಮಕ ಎಕ್ಸ್ ಪೋಸ್ಟ್ ಸಂಬಂಧ ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪ್ರಶಾಂತ್ ಮಾಕನೂರು ಅವರನ್ನು ಬಂಧಿಸಲಾಗಿದೆ.
ಕೆಪಿಸಿಸಿಯ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು, ಕರ್ನಾಟಕ ಬಿಜೆಪಿಯ ಎಕ್ಸ್ ಖಾತೆಯಲ್ಲಿ ವಿವಾದಾತ್ಮಕವಾದಂತ ಎಸ್ಸಿ, ಎಸ್ಟಿ ಸಮುದಾಯದ ಅನುದಾನ ಮುಸ್ಲೀಂ ಪಾಲಾಗುತ್ತಿದೆ ಎಂಬಂತ ವೀಡಿಯೋ ಜಾಹೀರಾತು ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಸಂಬಂಧಿಸಿದಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೇ.4ರಂದು ನೀಡಲಾಗಿದ್ದಂತ ರಮೇಶ್ ಬಾಬು ಅವರ ದೂರಿನ ಸಂಬಂಧ, ಇಂದು ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪ್ರಶಾಂತ್ ಮಾಕನೂರು ಅವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.
ಅಲ್ಲದೇ ಕಾಂಗ್ರೆಸ್ ಬಗೆಗಿನ ವಿವಾದಾತ್ಮಕ ಎಕ್ಸ್ ವೀಡಿಯೋ ಜಾಹೀರಾತು ಸಂಬಂಧ ಪ್ರಶಾಂತ್ ಮಾಕನೂರು ಅವರನ್ನು ವಿಚಾರಣೆಗೆ ಒಳಪಡಿಸಿರುವಂತ ಹೈಗ್ರೌಂಡ್ಸ್ ಠಾಣೆಯ ಪೊಲೀಸರು, ಆನಂತ್ರ ಅವರನ್ನು ಠಾಣಾ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
BREAKING: ಹೆಚ್.ಡಿ ರೇವಣ್ಣಗೆ ‘3 ದಿನ’ ಜೈಲೇ ಗತಿ: ಮಹಿಳೆ ಕಿಡ್ನ್ಯಾಪ್ ಕೇಸ್ ‘ಜಾಮೀನು ಅರ್ಜಿ’ ಮುಂದೂಡಿಕೆ
ನಾನು ಕಥಾನಾಯಕನಾದರೆ ಡಿಸಿಎಂ ಡಿಕೆ ಶಿವಕುಮಾರ್ ಖಳನಾಯಕ : ಮಾಜಿ ಸಿಎಂ HD ಕುಮಾರಸ್ವಾಮಿ ವಾಗ್ದಾಳಿ