ಮಂಡ್ಯ: ಇಂದು ಪ್ರಕಟವಾದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ, ತಾನು ಫೇಲ್ ಆಗಿದ್ದೇನೆ ಎಂಬುದಾಗಿ ಭಾವಿಸಿದಂತ ವಿದ್ಯಾರ್ಥಿನಿಯೊಬ್ಬಳು, ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಮಂಡ್ಯದ ಹುಲಿಗೆಪುರ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆಪುರ ಗ್ರಾಮದ ಹೆಚ್.ಎಂ ಅಮೃತ(15) ಇಂದು ಪ್ರಕಟವಾದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 353 ಅಂಕವನ್ನು ಪಡೆದಿದ್ದರು. ಶೇ.57ರಷ್ಟು ಫಲಿತಾಂಶ ಆಕೆಗೆ ಬಂದಿತ್ತು. ಆದ್ರೇ ಪಾಸ್ ಆಗಿದ್ದರೂ, ಫೇಲ್ ಆಗಿದ್ದೇನೆ ಎಂಬುದಾಗಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂದಹಾಗೆ ನಗರಕೆರೆ ಗ್ರಾಮದ ಪೂರ್ಣಿಮಾ ಪ್ರೌಢಶಾಲೆಯಲ್ಲಿ ಓದುತ್ತಿದ್ದಂತ ಅಮೃತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಮಾಡ್ಬೇಡಿ. ಇದು ನಮ್ಮ ಕಳಕಳಿ
ವಿದ್ಯಾರ್ಥಿಗಳೇ ಕಡಿಮೆ ಅಂಕ ಬರಲೀ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲ್ ಆಗಿರಿ. ಯಾವುದೇ ಕಾರಣಕ್ಕೂ ಇಂತಹ ದುಡುಕಿನ ನಿರ್ಧಾರ ಮಾಡಬೇಡಿ. ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ-2, 3 ಇದ್ದಾವೆ. ಕುಳಿತು ಚೆನ್ನಾಗಿ ಓದಿ ಬರೆಯಿರಿ. ಹೆಚ್ಚು ಅಂಕ ಬರ್ತಾವೆ, ಫೇಲ್ ಆಗಿದ್ರೂ ನೀವು ಪಾಸ್ ಆಗೋದು ಗ್ಯಾರಂಟಿ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಶಾಸಕ ಹೆಚ್.ಡಿ ರೇವಣ್ಣಗೆ 3 ದಿನ ಜೈಲೇ ಗತಿ: ಮಹಿಳೆ ಅಪಹರಣದ ಜಾಮೀನು ಅರ್ಜಿ ಮುಂದೂಡಿಕೆ
ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡಲು ಮಹಿಳೆ ಮೇಲೆ ಒತ್ತಡ: ರಾಷ್ಟ್ರೀಯ ಮಹಿಳಾ ಆಯೋಗ ಸ್ಪೋಟಕ ಹೇಳಿಕೆ