ಮಂಡ್ಯ: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಸಹ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ವಿಧ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.
ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದ ದಂಪತಿ ಮಂಚೇಗೌಡ ಭಾನುಮತಿ ಪುತ್ರಿ, ಅಮೃತ 15 ಗುರುವಾರ ಮಧ್ಯಾಹ್ನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರಕೆರೆ ಗ್ರಾಮದ ಪೂರ್ಣಿಮಾ ಫ್ರೌಡಶಾಲೆಯ ವಿಧ್ಯಾರ್ಥಿನಿ ಅಮೃತ ಎಸ್ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಸಹ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.
ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಮಾಡ್ಬೇಡಿ. ಇದು ನಮ್ಮ ಕಳಕಳಿ
ವಿದ್ಯಾರ್ಥಿಗಳೇ ಕಡಿಮೆ ಅಂಕ ಬರಲೀ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲ್ ಆಗಿರಿ. ಯಾವುದೇ ಕಾರಣಕ್ಕೂ ಇಂತಹ ದುಡುಕಿನ ನಿರ್ಧಾರ ಮಾಡಬೇಡಿ. ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ-2, 3 ಇದ್ದಾವೆ. ಕುಳಿತು ಚೆನ್ನಾಗಿ ಓದಿ ಬರೆಯಿರಿ. ಹೆಚ್ಚು ಅಂಕ ಬರ್ತಾವೆ, ಫೇಲ್ ಆಗಿದ್ರೂ ನೀವು ಪಾಸ್ ಆಗೋದು ಗ್ಯಾರಂಟಿ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ‘ಸೆನೆಗಲ್’ನಲ್ಲಿ ಬೋಯಿಂಗ್ 737 ವಿಮಾನ ರನ್ ವೇಯಲ್ಲೇ ಪತನ | Boeing 737 plane
ಪೆನ್ ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿನ ಹೋರಾಟ ಮಾಡದಂತೆ ಯಾರು ತಡೆದಿಲ್ಲ: ಡಿಸಿಎಂ ಡಿಕೆಶಿ