ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗದಮದಿಂದ ಖಾಲಿ ಇರುವಂತ ಚಾಲಕ ಕಂ ನಿರ್ವಾಹಕರ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ದೇಹದಾರ್ಡ್ಯತೆ ಪರಿಶೀಲನೆ ಬಳಿಕ, ಈಗ ಮೇ.15ರಿಂದ ಮೂಲ ದಾಖಲಾತಿಗಳ ಪರಿಶೀನಾ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ KSRTC ಮಾಹಿತಿ ನೀಡಿದ್ದು, ಕರಾರಸಾ ನಿಗಮದಲ್ಲಿ ಜಾಹೀರಾತು ಸಂ.1/2020 ದಿನಾಂಕ: ರನ್ವಯ ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯನ್ವಯ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ದಿನಾಂಕ: 06-03-2024 ರಿಂದ ಮೂಲ ದಾಖಲಾತಿ / ದೇಹದಾರ್ಡ್ಯತೆ ಪರಿಶೀಲನೆಯನ್ನು ಪ್ರಾರಂಭಿಸಲಾಗಿದ್ದು, ಪುಸ್ತುತ ಸದರಿ ಪರಿಶೀಲನಾ ಕಾರ್ಯವನ್ನು ದಿನಾಂಕ: 15-05-2024 ರಿಂದ ಕರಾರಸಾ ನಿಗಮದ ಕೇಂದ್ರ ಕಛೇರಿ, ಶಾಂತಿನಗರ, ಬೆಂಗಳೂರು ಇಲ್ಲಿ ಮುಂದುವರೆಸಲಾಗುತ್ತಿದೆ ಎಂದಿದೆ.
ಈ ಸಂಬಂಧ ಅಭ್ಯರ್ಥಿಗಳು ದಿನಾಂಕ: 08-05-2024 ರಿಂದ ನಿಗಮದ ಅಧಿಕೃತ ವೆಬ್-ಸೈಟ್ ಆದ ksrtcjobs.karnataka.gov.in ರಲ್ಲಿ ಕರಪತ್ರವನ್ನು ಡೌನ್-ಲೋಡ್ ಮಾಡಿಕೊಂಡು ಕರಪತ್ರದಲ್ಲಿ ತಿಳಿಸಿರುವ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಹಾಜರಾಗಲು ಈ ಮೂಲಕ ಸೂಚಿಸಲಾಗಿದೆ.
ವಿಶೇಷ ಸೂಚನೆ: ಪ್ರಸ್ತುತ ಅಭ್ಯರ್ಥಿಗಳ ಮೂಲ ದಾಖಲಾತಿ / ದೇಹದಾರ್ಡ್ಯತೆ ಪರಿಶೀಲನೆ ಮಾತ್ರ ನಡೆಸಲಾಗುತ್ತಿದೆ. ಅರ್ಹರಾದ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆ ನಡೆಸುವ ಕುರಿತು ಪುತ್ಯೇಕ ದಿನಾಂಕ / ಸ್ಥಳವನ್ನು ನಿಗಧಿಪಡಿಸಲಾಗುವುದು. ಸದರಿ ಹುದ್ದೆಯ ಆಯ್ಕೆಯು ಗಣಕೀಕೃತ ಚಾಲನಾ ವೃತ್ತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಹಾಗೂ ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪಾರದರ್ಶಕವಾಗಿ ನಡೆಯುವುದರಿಂದ ಮಾನವ ಹಸ್ತಕ್ಷೇಪ ಇರುವುದಿಲ್ಲ. ಆದುದರಿಂದ ಅಭ್ಯರ್ಥಿಗಳು ಯಾವುದೇ ಶಿಫಾರಸ್ಸು, ಮಧ್ಯವರ್ತಿಗಳ ಅಮಿಷಗಳಿಗೆ ಒಳಗಾಗಬಾರದೆಂದು ಸ್ಪಷ್ಟಪಡಿಸಿದೆ.
ಈ ಅವಧಿಯ ನಂತ್ರ ಈ ಖಾತೆಗಳನ್ನ ಮುಚ್ಚಲಾಗುವುದು : ಗ್ರಾಹಕರಿಗೆ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ ಎಚ್ಚರಿಕೆ