ನವದೆಹಲಿ : ನಗದು ವಹಿವಾಟುಗಳನ್ನ ತಡೆಗಟ್ಟುವ ಪ್ರಯತ್ನದಲ್ಲಿ ನಗದು ಸಾಲಗಳಲ್ಲಿ 20,000 ರೂ.ಗಳ ಮಿತಿಯನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (NBFC) ಸೂಚಿಸಿದೆ ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 269 ಎಸ್ಎಸ್’ನ ನಿಬಂಧನೆಗಳನ್ನ ದಯವಿಟ್ಟು ನೋಡಿ, ಇದು ಯಾವುದೇ ವ್ಯಕ್ತಿಯು 20,000 ರೂ.ಗಿಂತ ಹೆಚ್ಚಿನ ಸಾಲದ ಮೊತ್ತವನ್ನ ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದರ ಪರಿಣಾಮವಾಗಿ, ಯಾವುದೇ ಎನ್ಬಿಎಫ್ಸಿ 20,000 ರೂ.ಗಿಂತ ಹೆಚ್ಚಿನ ಸಾಲದ ಮೊತ್ತವನ್ನು ನಗದು ರೂಪದಲ್ಲಿ ವಿತರಿಸಬಾರದು.
ಐಐಎಫ್ಎಲ್ ಫೈನಾನ್ಸ್ ವಿರುದ್ಧ ಕ್ರಮ ಕೈಗೊಂಡ ನಂತರ ಈ ಪತ್ರವನ್ನ ಕಳುಹಿಸಲಾಗಿದ್ದು, ಇದು ಶಾಸನಬದ್ಧ ಮಿತಿಯನ್ನ ಮೀರಿ ನಗದು ರೂಪದಲ್ಲಿ ಸಾಲ ವಿತರಣೆ ಮತ್ತು ಸಂಗ್ರಹಣೆ ಸೇರಿದಂತೆ ಹಲವಾರು ನಿಯಮಗಳನ್ನ ಉಲ್ಲಂಘಿಸಿದೆ ಎಂದು ಕಂಡುಬಂದಿದೆ ಎನ್ನಲಾಗ್ತಿದೆ.
Evening Walking Benefits : ಸಂಜೆ ವಾಕಿಂಗ್ ಮಾಡಿದ್ರೆ, ಅನೇಕ ಪ್ರಯೋಜನ.. ಆ ಸಮಸ್ಯೆ ನಿವಾರಣೆ!
BREAKING: ರಾಜ್ಯ ಸರ್ಕಾರದಿಂದ ‘ಪದವಿ’ ಕಾರ್ಯಕ್ರಮಗಳ ‘ಅವಧಿ, ಪಠ್ಯಕ್ರಮ’ಗಳನ್ನು ಪರಿಷ್ಕರಿಸಿ ಆದೇಶ