ಅಹ್ಮದಾಬಾದ್ : ಮೂರನೇ ಹಂತದ ಮತದಾನ ನಡೆದಿದೆ. ಅಹ್ಮದಾಬಾದ್’ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಮತ ಚಲಾಯಿಸಿ ಹೊರಬಂದಾಗ, ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಅಲ್ಲಿ ನಿಂತಿದ್ದರು. ದೃಷ್ಟಿಹೀನ ಯುವತಿಯೊಬ್ಬಳು ಜನಸಮೂಹದಲ್ಲಿ ನಿಂತಿದ್ದು, ಯುವತಿಯನ್ನ ಕಂಡ ಪ್ರಧಾನಿ ಮೋದಿ ಆಕೆಯನ್ನ ತಲುಪಿದರು. ಯುವತಿಯೊಂದಿಗೆ ಮಾತನಾಡಿದ್ದು, ಈ ಸ್ಮರಣೀಯ ಕ್ಷಣವನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ.
ಜನಸಮೂಹದಲ್ಲಿ ಹಾಜರಿದ್ದ ಯುವತಿಯನ್ನ ಸಂಭಾಷಣೆಯ ಸಮಯದಲ್ಲಿ ಪ್ರಧಾನಿ ಮೋದಿಯವರ ಕೈ ಹಿಡಿದು ನಿಂತಿದ್ದಾಳೆ. ಇದನ್ನು ನೋಡಿ ಎಸ್ಪಿಜಿ ಜನರು ಮಧ್ಯಪ್ರವೇಶಿಸುತ್ತಾರೆ. ಆದ್ರೆ, ಪಿಎಂ ಮೋದಿ ಆಕೆಯೊಂದಿಗೆ ಮಾತು ಮುಂದುವರೆಸಿದ್ದು, ಕೈ ಸನ್ನೆ ಮೂಲಕ ಸೂಚಿಸಿದರು. ಯುವತಿಗೆ ನೋಡಲು ಸಾಧ್ಯವಾಗದ ಕಾರಣ, ಕೈಗಳನ್ನ ಹಿಡಿದಿದ್ದಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
The PM saw a visually challenged girl, went to her & talked with her.. He even asked the SPG guy to relax….
Such a heartwarming video ♥️ pic.twitter.com/kwnyJY9ExA
— Mr Sinha (Modi's family) (@MrSinha_) May 7, 2024
ಲೋಕಸಭಾ ಚುನಾವಣೆ: ಶಿವಮೊಗ್ಗದಲ್ಲಿ ನಿರ್ಬಂಧದ ನಡುವೆ ‘ಮತದಾನ’ದ ವಿಡಿಯೋ ವೈರಲ್
BREAKING : ದೇಶಭ್ರಷ್ಟ ‘ನೀರವ್ ಮೋದಿ’ಗೆ ಬಿಗ್ ಶಾಕ್ : ‘ಜಾಮೀನು ಅರ್ಜಿ’ ತಿರಸ್ಕರಿಸಿದ ‘UK’ ಕೋರ್ಟ್