ಬೆಂಗಳೂರು: ಇಂದು ರಾಜ್ಯಾಧ್ಯಂತ ಲೋಕಸಭಾ ಚುನಾವಣೆಗಾಗಿ 14 ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿ, ಬಿಸಿಲಲ್ಲಿ ಬಸವಳಿದಿದ್ದಂತ ಸಿಎಂ ಸಿದ್ಧರಾಮಯ್ಯ, ಇಂದು ರಿಲ್ಯಾಕ್ಸ್ ಗಾಗಿ ಊಟಿಗೆ ಪ್ರಯಾಣ ಬೆಳೆಸಿದ್ದಾರೆ.
ಸಿಎಂ ಸಿದ್ಧರಾಮಯ್ಯ ಅವರು ಲೋಕಾ ಸಮರದಲ್ಲಿ ಪ್ರಚಾರ ನಡೆಸಿ, ಬಸವಳಿದಿದ್ದರು. ಈಗ ಲೋಕಸಭಾ ಚುನಾವಣೆ ಮತ ಸಮರ ಮುಗಿದ ನಂತ್ರ, ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಇಂದು ಅವರು ಹೆಚ್.ಎಎಲ್ ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಊಟಿಗೆ ತೆರಳಿ, ಮೂರು ದಿನಗಳ ಕಾಲ ಊಟಿಯಲ್ಲೇ ವಿಶ್ರಾಂತಿಯನ್ನು ಪಡೆಯಲಿದ್ದಾರೆ.
ಸಿಎಂ ಸಿದ್ಧರಾಮಯ್ಯ ಊಟಿಗೆ ತೆರಳೋ ಮುನ್ನ ಅವರನ್ನು ಸಚಿವರಾದಂತ ರಾಮಲಿಂಗಾರೆಡ್ಡಿ, ಮಹದೇವಪ್ಪ, ರಾಜಣ್ಣ ಭೇಟಿ ಮಾಡಿ ಕೆಲ ಕಾಲ ಅನೌಪಚಾರಿಕ ಚರ್ಚೆ ನಡೆಸಿದರು. ಅಲ್ಲದೇ 2ನೇ ಹಂತದ ಚುನಾವಣಾ ಮತದಾನ ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಸಿದರು.
ಭಾರತೀಯ ಸೇನೆಯಿಂದ ಭರ್ಜರಿ ಭೇಟೆ : ಜಮ್ಮುಕಾಶ್ಮೀರದ ಕುಲ್ಗಾಮದಲ್ಲಿ ಮೂವರು ಉಗ್ರರು ಫಿನಿಶ್!
‘ಪೊಲೀಸರು ಪೆನ್ ಡ್ರೈವ್ ವಿತರಿಸಿದ್ರೂ, ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲ’ : ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ