ಶಿವಮೊಗ್ಗ: ಸಾಗರದಲ್ಲಿ ಹಾಲಪ್ಪ, ಸಂಸದ ಬಿವೈ ರಾಘವೇಂದ್ರ ಅವರ ಸಾಧನೆ ಶೂನ್ ಆಗಿದೆ. ಅವರು ಸಾಧನೆ ಏನೂ ಮಾಡಿಲ್ಲ. ಬಿಜೆಪಿಯವರು ಓಸಿ ಮಾಡೋರಿಗೆ, ಸಾರಾಯಿ ಹೆಂಡ ಮಾರೋರಿಗೆ ಆಸರೆ ಆಗೋರು ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ಧಾಳಿ ನಡೆಸಿದರು.
ಇಂದು ತಮ್ಮ ಹುಟ್ಟೂರು ಬೇಳೂರಿನಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ದಂಪತಿ, ಪುತ್ರನ ಸಮೇತವಾಗಿ ಆಗಮಿಸಿ ಮತ ಚಲಾಯಿಸಿದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತಿನ ವಾತಾವರಣ ನೋಡಿದ್ರೆ ಗೀತಾ ಶಿವರಾಜ್ ಕುಮಾರ್ ಹೈ ಲೀಡಲ್ಲಿ ಗೆಲ್ಲುತ್ತಾರೆ. ಇಡೀ ತಾಲೂಕಿನಲ್ಲಿ ನಾನು ಓಡಾಡಿದ್ದೇನೆ. ಒಳ್ಳೆಯ ಅಭಿಪ್ರಾಯವಿದೆ. ರಾಘವೇಂದ್ರ ಯಾವುದೇ ಬಡವರು, ಜನರ ಪರ ಕೆಲಸ ಮಾಡಿಲ್ಲ. ಅವರು ಕೇಳಿರೋದು ಒಂದೇ ಮೋದಿ ಪರ ವೋಟು ಕೊಡಿ ಅಂತ. ಅವರು ಯಾವತ್ತೂ ನನಗೆ ವೋಟ್ ಕೊಡಿ ಎಂದು ಕೇಳಿಲ್ಲ ಎಂದರು.
ಬಂಗಾರಪ್ಪನವರ ಕುಟುಂಬ, ಶಿವರಾಜ್ ಕುಮಾರ್ ಅವರ ಹೆಂಡತಿ. ಮಹಿಳೆಯರ ಬಗ್ಗೆ ಸಾಗರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಈ ಬಾರಿಯೂ ಸಾಗರದಲ್ಲಿ 16,000ಕ್ಕೂ ಹೆಚ್ಚು ಲೀಡ್ ಬರಲಿದೆ. ಯಾರು ಇಲ್ಲ ಅನ್ನೋ ಪದ ಹೇಳುತ್ತಿಲ್ಲ ಎಂದರು.
ಹೌದು ಸಂಸದ ಬಿ.ವೈ ರಾಘವೇಂದ್ರ ಅಭಿೃಮಾಡಿದ್ದಾರೆ. ಅವರ ಮನೆ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಬೇಕಾದಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಕಾಲೇಜುಗಳನ್ನು ಮಾಡಿಕೊಂಡಿದ್ದಾರೆ. ಜನರಿಗೆ ಅಭಿವೃದ್ಧಿ ಏನು ಮಾಡಿಲ್ಲ. ಸಾಗರ, ಹೊಸನಗರಕ್ಕೆ ಅವರ ಕೊಡುಗೆ ಏನು ಇಲ್ಲ. ತೋರಿಸಲಿ. ಅದು ಕಾಗೋಡು ಮಾತ್ರ ಮಾಡಿರೋದು ಎಂದರು.
ಬಂಗಾರಪ್ಪನವರ ಜಪ್ರಿಯ ಕಾರ್ಯಕ್ರಮ ಮಾಡಿದ್ದಾರೆ. ಅವರ ಜನಪರ ಕಾರ್ಯಗಳೇ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಕೈ ಹಿಡಿಯಲಿದೆ ಎಂದರು.
ವಿನೋದ್ ರಾಜ್ ಗಡಿಪಾರಿನಲ್ಲಿ ನನ್ನ ಕೈವಾಡವಿಲ್ಲ
ವಿನೋದ್ ರಾಜ್ ವಿರುದ್ಧ 16 ಓಸಿ ಕೇಸಿದೆ. ಅಂತವನ ಪರವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಸಂಸದರಾಗಿ ಬಿ.ವೈ ರಾಘವೇಂದ್ರ ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಮಾನ ಮರ್ಯಾಧೆ ಇಲ್ಲ ಅನ್ನಿಸುತ್ತದೆ ಕಣ್ರಿ. ಬಿಜೆಪಿಯವರು ಏನು ಓಸಿ ಮಾಡೋರಿಗೆ, ಸಾರಾಯಿ ಹೆಂಡ ಮಾರೋರಿಗೆ ಆಸರೆ ಆಗ್ತೀರಾ ಎಂದು ಪ್ರಶ್ನಿಸಿದರು.
ಅವನೊಬ್ಬನೇ ಅಲ್ಲ. ನಮ್ಮ ಪಕ್ಷದವನನ್ನು ಗಡಿಪಾರು ಮಾಡಲಾಗಿದೆ. ನಾವು ಏನು ಗಡಿಪಾರು ಮಾಡೋದಿಲ್ಲ. ಪೊಲೀಸ್ ಇಲಾಖೆ ಇದೆ. ಎಸಿ ಇದ್ದಾರೆ. ಅವರು ಕಳಿಸೋದು. ಅವರ ಕಾಲದಲ್ಲಿ ಎಷ್ಟು ಜನರನ್ನು ಗಡಿಪಾರು ಮಾಡಿದ್ದಾರೆ ಅಂತ ನೋಡಿ ಎಂದರು.
ಹಾಲಪ್ಪ ಬಾರು ಮಾಡಿ ಬಡ ಕುಟುಂಬವನ್ನು ಹಾಳು ಮಾಡಿದ್ರು. ಮನೆ ಮೇಲೆ ಮನೆ ಕಟ್ಟಿದರು. ಈಗ ಬಿ.ವೈ ರಾಘವೇಂದ್ರ ಓಸಿ ಮಾಡೋರಿಗೆ ಸಪೋರ್ಟ್ ಮಾಡ್ತಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ವರದಿ: ವಸಂತ ಬಿ ಈಶ್ವರಗೆರೆ
ಲೋಕಸಭೆ ಚುನಾವಣೆ : ರಾಜ್ಯದಲ್ಲಿ ಬಿಜೆಪಿ 25-26 ಸ್ಥಾನಗಳನ್ನು ಗೆಲ್ಲಲಿದೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
ಗಾಂಧಿನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ‘ಅಮಿತ್ ಶಾ’ | LokSabha Election 2024