ಕೊಡಗು: ಒಂದು ಶುಭ ಕಾರ್ಯವಾಗುತ್ತಿದೆ ಅಂದ್ರೆ ಅದು ನಿರ್ವಿಘ್ನವಾಗಿ ನಡೆಯಲಪ್ಪ ಅಂತ ಬೇಡಿಕೊಳ್ತಾರೆ. ಮದುವೆ ಆದ್ರೇ ಸಾಕು ಒಳ್ಳೇದಾದ್ರೆ ಸಾಕು ಅನ್ನೋರೇ ಹೆಚ್ಚು. ಆದ್ರೇ ಇಲ್ಲೊಂದು ಮದುವೆ ವರನ ಸ್ನೇಹಿತರಿಗೆ ಊಟದಲ್ಲಿ ಸ್ವೀಟ್ ಸಿಗಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಮುರಿದು ಬಿದ್ದಿದೆ. ಆ ಬಗ್ಗೆ ಮುಂದೆ ಓದಿ.
ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಶನಿವಾರದಂದು ಹಾನಗಲ್ ಯುವತಿ ಹಾಗೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿರೋ ತುಮಕೂರಿನ ಹರ್ಷಿತ್ ಎಂಬಾತನೊಂದಿಗೆ ಮದುವೆ ನಿಶ್ಚಿತಾರ್ಥ ಕಾರ್ಯ ನಡೆಯಿತು. ಈ ವಧು ವರರಿಬ್ಬರೂ ಮ್ಯಾಟ್ರಿಮೋನಿಯಲ್ಲಿ ಪರಿಚಿತರಾಗಿ, ಮದುವೆಯವರೆಗೆ ಬಂದಿದ್ದರು.
ಮ್ಯಾಟ್ರಿಮೋನಿಯಲ್ಲಿ ಯುವತಿಯನ್ನು ನೋಡಿದ್ದಂತ ಹರ್ಷಿತ್ ಆಕೆಯನ್ನು ಮದುವೆಯಾಗೋದಕ್ಕೆ ಒಪ್ಪಿಕೊಂಡಿದ್ದರು. ಅಲ್ಲದೇ ಕುಟುಂಬಸ್ಥರನ್ನು ಒಪ್ಪಿಸಿ, ರಿಸೆಪ್ಷನ್ ಅನ್ನು ಸೋಮವಾರಪೇಟೆಯಲ್ಲಿ ಶನಿವಾರ ರಾತ್ರಿ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ವರನ ಕಡೆಯವರು ಜಾನಕಿ ಕನ್ವೆನ್ಷನ್ ಹಾಲಿಗೆ 2 ಗಂಟೆಗೆ ಬಂದಿದ್ರೇ, ವಧು ಮತ್ತು ಅವರ ಕುಟುಂಬದವರು 2 ಗಂಟೆ ತಡವಾಗಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ಇದೇ ವಿಚಾರಕ್ಕೆ ಆರಂಭದಲ್ಲಿ ಗಲಾಟೆ ಕೂಡ ಆಗಿತ್ತು. ರಿಸೆಪ್ಷನ್ ಆರಂಭಗೊಂಡು, ಊಟ ಶುರುವಾದಾಗ ವರನ ಸ್ನೇಹಿತರಿಗೆ ಊಟದ ವೇಳೆಯಲ್ಲಿ ಸ್ವೀಟ್ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ವರ ಹರ್ಷಿತ್ ವಧುವಿನ ಕಡೆಯವರೊಂದಿಗೆ ಗಲಾಟೆ ಮಾಡಿದ್ದಾನೆ. ಈ ಗಲಾಟೆಯಲ್ಲಿ ಭಾನುವಾರ ನಡೆಯಬೇಕಿದ್ದಂತ ಮದುವೆಯೇ ಮುರಿದು ಬಿದ್ದಿದೆ.
ಈ ಗಲಾಟೆ ಕೇಸ್ ಸೋಮವಾರಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವರ-ವಧುವಿನ ಕಡೆಯವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಕೊನೆಗೆ ವರನ ಮೇಲೆ ವರದಕ್ಷಿಣೆ ಕಿರುಕುಳ ದೂರು ಕೂಡ ನೀಡಲಾಗಿದೆ.
ಶಿವಮೊಗ್ಗ: ಮತಗಟ್ಟೆಗಳಿಗೆ ತೆರಳಲು ಮಸ್ಟರಿಂಗ್ ಕೇಂದ್ರಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ತಯಾರಿ
Teacher Jobs: ‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳೇ ಗಮನಿಸಿ: ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ