ಕಾರವಾರ: ರಾಜ್ಯದಲ್ಲಿ ಮತ್ತೆ ಮಂಗನಕಾಯಿಲೆ ಉಲ್ಬಣಗೊಂಡಿದೆ. ಮಲೆನಾಡಿನಲ್ಲಿ ಮಂಗನಕಾಯಿಲೆ ದಿನೇ ದಿನೇ ಆರ್ಭಟಿಸುತ್ತಿದೆ. ಇಂದು ಮಂಗನಕಾಯಿಲೆಯಿಂದಾಗಿ 5 ವರ್ಷದ ಮಗುವೊಂದು ಸಾವನ್ನಪ್ಪಿದೆ.
ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆ ಉಲ್ಭಣಿಸಿದೆ. ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಅರೆಂದೂರಿನಲ್ಲಿ ಐದು ವರ್ಷದ ಹೆಣ್ಣುಮಗು ಮಂಗನಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯದೊಂದಿಗೆ ಸಾವನ್ನಪ್ಪಿದೆ. ಹೀಗಾಗಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಬಲಿಯಾದವರ ಸಂಖ್ಯೆ ಒಂಭತ್ತಕ್ಕೆ ಏರಿಕೆಯಾಗಿದೆ.
ಅಂದಹಾಗೇ ಐದು ವರ್ಷದ ಹೆಣ್ಣುಮಗು ಜ್ವರದಿಂದ ಬಳಲುತ್ತಿತ್ತು. ಹೀಗಾಗಿ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದಂತ ವೈದ್ಯರು ಬಾಲಕಿಗೆ ಮಂಗನ ಕಾಯಿಲೆ ಬಂದಿರೋದಾಗಿ ದೃಢಪಡಿಸಿದ್ದರು. ಆ ಬಳಿಕ ಚಿಕಿತ್ಸೆ ಪಡೆಯುತ್ತಿದ್ದಂತ ಮಗು, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.
BREAKING: ಅಪಹರಣ ಪ್ರಕರಣ: 4 ದಿನ ಎಚ್.ಡಿ.ರೇವಣ್ಣಗೆ ಎಸ್ಐಟಿ ಕಸ್ಟಡಿ | HD Revanna