ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ತನ್ನ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ಐಸಿಎಸ್ಇ ಅಥವಾ 10 ನೇ ತರಗತಿ) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್ಸಿ ಅಥವಾ 12 ನೇ ತರಗತಿ) ಅಂತಿಮ ಪರೀಕ್ಷೆಗಳ ಫಲಿತಾಂಶಗಳನ್ನು ಮೇ 6 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗುವುದು ಎಂದು ಭಾನುವಾರ ತಿಳಿಸಿದೆ.
ವಿದ್ಯಾರ್ಥಿಗಳು ಐಸಿಎಸ್ಇ ಮತ್ತು ಐಎಸ್ಸಿ ವರ್ಷ 2024 ಪರೀಕ್ಷೆಯ ಫಲಿತಾಂಶಗಳನ್ನು ಕೌನ್ಸಿಲ್ನ ವೆಬ್ಸೈಟ್ಗಳು, cisce.org ಮತ್ತು results.cisce.org ಈ ಕೆಳಗಿನ ಮಾಹಿತಿಯನ್ನು ಒದಗಿಸುವ ಮೂಲಕ ಪರಿಶೀಲಿಸಬಹುದು:
ಯೂನಿಕ್ಯೂ ID
ಇಂಡೆಕ್ಸ್ ನಂಬರ್
ಕ್ಯಾಪ್ಚಾ (ಪರದೆಯ ಮೇಲೆ ತೋರಿಸಿರುವಂತೆ).
ಮಂಡಳಿಯ ವೆಬ್ಸೈಟ್ಗಳ ಜೊತೆಗೆ, ಐಸಿಎಸ್ಇ ಮತ್ತು ಐಎಸ್ಸಿಯ ಫಲಿತಾಂಶಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ ಎಂದು ಕೌನ್ಸಿಲ್ ತಿಳಿಸಿದೆ.
‘ವುಹಾನ್’ ಲ್ಯಾಬ್ನಿಂದ ಕೋವಿಡ್ ಸೋರಿಕೆಯಾಗುವ ಸಾಧ್ಯತೆ ಹೆಚ್ಚು: ಯುಕೆಗೆ ಅಮೆರಿಕ ಎಚ್ಚರಿಕೆ