ಬನಸ್ಕಾಂತ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬನಸ್ಕಾಂತದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ 4000 ಕಿಲೋಮೀಟರ್ ನಡೆದಿದ್ದರೆ, ಪ್ರಧಾನಿ ಮೋದಿ ತಮ್ಮ ಅರಮನೆಯಲ್ಲಿ ಕುಳಿತಿದ್ದಾರೆ ಮತ್ತು ಅವರಿಗೆ ರೈತರ ದುಃಸ್ಥಿತಿ ಅರ್ಥವಾಗುತ್ತಿಲ್ಲ ಎಂದರು.
“ಪ್ರಧಾನಿ ಮೋದಿ ನನ್ನ ಸಹೋದರನನ್ನ ‘ಶೆಹಜಾದಾ’ ಎಂದು ಕರೆಯುತ್ತಾರೆ. ನನ್ನ ಸಹೋದರ 4,000 ಕಿಲೋಮೀಟರ್ ನಡೆದು, ದೇಶದ ಜನರನ್ನ ಭೇಟಿಯಾದರು ಮತ್ತು ಅವರ ಜೀವನದಲ್ಲಿ ಸಮಸ್ಯೆಗಳೇನು ಎಂದು ಕೇಳಿದರು ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಮತ್ತೊಂದೆಡೆ, ಚಕ್ರವರ್ತಿ ನರೇಂದ್ರ ಮೋದಿ ಅರಮನೆಗಳಲ್ಲಿ ವಾಸಿಸುತ್ತಿದ್ದಾರೆ. ರೈತರು ಮತ್ತು ಮಹಿಳೆಯರ ಅಸಹಾಯಕತೆಯನ್ನ ಅವರು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ? ನರೇಂದ್ರ ಮೋದಿ ಅಧಿಕಾರದಿಂದ ಸುತ್ತುವರೆದಿದ್ದಾರೆ. ಅವ್ರ ಸುತ್ತಲಿನ ಜನರು ಅವರಿಗೆ ಹೆದರುತ್ತಾರೆ. ಯಾರೂ ಏನನ್ನೂ ಹೇಳುವುದಿಲ್ಲ. ಯಾರಾದರೂ ಧ್ವನಿ ಎತ್ತಿದರೂ, ಆ ಧ್ವನಿಯನ್ನು ನಿಗ್ರಹಿಸಲಾಗುತ್ತದೆ” ಎಂದು ಅವರು ಆರೋಪಿಸಿದರು.
PM मोदी मेरे भाई को शहजादा बोलते हैं।
मैं बताना चाहती हूं कि मेरे भाई 4,000 किमी. पैदल चले, देश के लोगों से मिले और उनसे पूछा कि आपके जीवन में क्या समस्याएं हैं?
एक तरफ शहंशाह नरेंद्र मोदी जी महलों में रहते हैं। वह किसानों, महिलाओं की मजबूरी कैसे समझ पाएंगे?
नरेंद्र मोदी सत्ता… pic.twitter.com/OGoeVvgrMl
— Congress (@INCIndia) May 4, 2024
ಪ್ರಧಾನಿ ಮೋದಿ ತಮ್ಮ ಚುನಾವಣಾ ಭಾಷಣಗಳಲ್ಲಿ ರಾಹುಲ್ ಗಾಂಧಿ ‘ಶೆಹಜಾದಾ’ ಎಂದು ಉಲ್ಲೇಖಿಸುತ್ತಿದ್ದಾರೆ. ಮೇ 3 ರಂದು, ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸದಿದ್ದಕ್ಕಾಗಿ ಗಾಂಧಿ ವಂಶಸ್ಥರನ್ನ ತರಾಟೆಗೆ ತೆಗೆದುಕೊಂಡಿದ್ದರು.
‘ಇದು ನವ ಭಾರತ, ಮನೆಗೆ ನುಗ್ಗಿ ಹೊಡೆಯುತ್ತೇವೆ’ ; ಜಾರ್ಖಂಡ್ ರ್ಯಾಲಿಯಲ್ಲಿ ‘ಪ್ರಧಾನಿ ಮೋದಿ’
ಗಿಡಮೂಲಿಕೆಗಳು, ಮಸಾಲೆಗಳಲ್ಲಿ 10 ಪಟ್ಟು ಹೆಚ್ಚು ‘ಕೀಟನಾಶಕ’ ಬಳಕೆಗೆ ‘FSSAI’ ಅನುಮತಿ