ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿರುವ ‘ಡೀಪ್ ಫೇಕ್ ಮಾರ್ಫಡ್ ವಿಡಿಯೋ’ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅರುಣ್ ರೆಡ್ಡಿ ಎನ್ನುವ ಕಾಂಗ್ರೆಸ್ ಸದಸ್ಯನನ್ನ ಸೋಮವಾರ ಬಂಧಿಸಿದ್ದಾರೆ. ರೆಡ್ಡಿ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ‘ಸ್ಪಿರಿಟ್ ಆಫ್ ಕಾಂಗ್ರೆಸ್’ ಖಾತೆಯನ್ನು ನಿರ್ವಹಿಸುತ್ತಿದ್ದ ಎನ್ನಲಾಗ್ತಿದೆ.
ಅಂದ್ಹಾಗೆ, ಈ ಹಿಂದೆ ದೆಹಲಿ ಪೊಲೀಸರು ತೆಲಂಗಾಣ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ ಅವರಿಗೆ “ಡೀಪ್ ಫೇಕ್” ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಿದ್ದರು. ರೆಡ್ಡಿ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ (TPCC) ನಾಲ್ವರು ಸದಸ್ಯರಾದ ಶಿವಕುಮಾರ್ ಅಂಬಾಲಾ, ಅಸ್ಮಾ ತಸ್ಲೀಮ್, ಸತೀಶ್ ಮನ್ನೆ ಮತ್ತು ನವೀನ್ ಪೆಟ್ಟೆಮ್ ಅವರಿಗೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 91 ಮತ್ತು 160 ರ ಅಡಿಯಲ್ಲಿ ಸಮನ್ಸ್ ನೀಡಲಾಗಿದೆ.
ಗಮನಿಸಿ: ಮೇ.6ರವರೆಗೆ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಹೆಸರು ಸೇರ್ಪಡೆಗೆ ಅವಕಾಶ
ರಾಹುಲ್ ಗಾಂಧಿಗೆ ತಕ್ಷಣವೇ SIT ನೊಟೀಸ್ ಕೊಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ