ರಾಯ್ಬರೇಲಿ : 2024ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಶುಕ್ರವಾರ (ಮೇ 3) ರಾಯ್ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತಾಯಿ ಸೋನಿಯಾ ಗಾಂಧಿ ಉಪಸ್ಥಿತರಿದ್ದರು. ಇಲ್ಲಿಯವರೆಗೆ ಸಸ್ಪೆನ್ಸ್ ಸೃಷ್ಟಿಸಿದ್ದ ಯುಪಿಯ ಎರಡು ಉನ್ನತ ಸ್ಥಾನಗಳ ಬಗ್ಗೆ ಈಗ ಈ ಸಸ್ಪೆನ್ಸ್ ಮುಗಿದಿದೆ.
#WATCH | Uttar Pradesh: Congress MP Rahul Gandhi files nomination from Raebareli for the upcoming #LokSabhaElection2024
BJP has fielded Dinesh Pratap Singh from Raebareli. pic.twitter.com/R0IYOCnJA1
— ANI (@ANI) May 3, 2024
ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ರಾಹುಲ್ ಗಾಂಧಿ ಅವರ ನಿರ್ಧಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ ಮತ್ತು ವಯನಾಡ್’ನಲ್ಲಿ ಸೋಲು ಖಚಿತ ಎಂದು ಗೊತ್ತಾದ ನಂತರ ಅವರು ಮೂರನೇ ಸ್ಥಾನವನ್ನ ಕಂಡುಕೊಂಡಿದ್ದಾರೆ ಎಂದು ಹೇಳಿದರು. ಓಡಬೇಡಿ!’ ವಯನಾಡ್’ನಲ್ಲಿ ‘ರಾಜಕುಮಾರ’ ಸೋಲಲಿದ್ದಾರೆ ಮತ್ತು ಸೋಲಿನ ಭಯದಿಂದ ಮತದಾನ ಮುಗಿದ ಕೂಡಲೇ ಅವರು ಮೂರನೇ ಸ್ಥಾನವನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ಅವರು ಈಗಾಗಲೇ ಹೇಳಿದ್ದರು. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ಗುರಿಯಾಗಿಸಿಕೊಂಡ ಪ್ರಧಾನಿ, ಕಾಂಗ್ರೆಸ್ನ ಅತ್ಯಂತ ಎತ್ತರದ ನಾಯಕ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯ ಮಾಡುವುದಿಲ್ಲ ಎಂದು ಮೂರು ತಿಂಗಳ ಹಿಂದೆ ಹೇಳಿದ್ದರು. “ಅವರು ಭಯದಿಂದ ಓಡಿಹೋಗುತ್ತಾರೆ. ಅವರು ರಾಜಸ್ಥಾನಕ್ಕೆ ಓಡಿಹೋಗಿ ರಾಜ್ಯಸಭೆಗೆ ಬಂದರು ಎಂದಿದ್ದರು.
ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ‘CBI’ ಗೆ ವಹಿಸಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹ
BREAKING : CBSE 10,12ನೇ ತರಗತಿ ‘ಫಲಿತಾಂಶ ಬಿಡುಗಡೆ’ ದಿನಾಂಕ ಘೋಷಣೆ, ಇಲ್ಲಿದೆ ವಿವರ |CBSE Board Result
Rain in Bengaluru: ಬೆಂಗಳೂರಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಮಳೆ