ನವದೆಹಲಿ: ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಅಮಾನತುಗೊಂಡ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ನ್ಯಾಯಾಲಯದ ಆದೇಶವಿಲ್ಲದೆ ರದ್ದುಗೊಳಿಸಲು ಅಥವಾ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ (MEA) ಗುರುವಾರ ತಿಳಿಸಿದೆ.
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ, “ರಾಜತಾಂತ್ರಿಕ ಪಾಸ್ಪೋರ್ಟ್ ಹಿಂತೆಗೆದುಕೊಳ್ಳುವುದು ಪಾಸ್ಪೋರ್ಟ್ ಕಾಯ್ದೆಯ ನಿಬಂಧನೆಗಳ ಪ್ರಕಾರ ಮಾತ್ರ ಸಂಭವಿಸಬಹುದು. ನ್ಯಾಯಾಲಯದ ಆದೇಶದ ನಂತರವೇ ಪಾಸ್ಪೋರ್ಟ್’ನ್ನ ಹಿಂತೆಗೆದುಕೊಳ್ಳಬಹುದು ಎಂದು ನಿಬಂಧನೆಗಳು ಹೇಳುತ್ತವೆ. ಇನ್ನು ನಮಗೆ ಇನ್ನೂ ಅಂತಹ ಯಾವುದೇ ನ್ಯಾಯಾಲಯದ ನಿರ್ದೇಶನವಿಲ್ಲ” ಎಂದು ಹೇಳಿದರು.
ಲೈಂಗಿಕ ವೀಡಿಯೋಗಳ ಆರೋಪಗಳ ತನಿಖೆಯಲ್ಲಿ ಪಾಲ್ಗೊಳ್ಳಲು ಕಳಂಕಿತ ಬಿಜೆಪಿ ನಾಯಕ ಭಾರತಕ್ಕೆ ಮರಳಲು ವಿದೇಶಾಂಗ ಸಚಿವಾಲಯದ ಮೂಲಕ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದ ಒಂದು ದಿನದ ನಂತರ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಬಂದಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ‘ಚಾರ್ಜ್ ಶೀಟ್’ ಕುರಿತು ‘ಸುಪ್ರೀಂಕೋರ್ಟ್’ ಮಹತ್ವದ ತೀರ್ಪು
Brij Bhushan: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ‘ಬ್ರಿಜ್ ಭೂಷಣ್ ಸಿಂಗ್’ ಟಿಕೆಟ್ ಮಿಸ್, ಪುತ್ರನಿಗೆ ಟಿಕೆಟ್ ಘೋಷಣೆ