ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ ಮೂಲಕ ಹಾವೇರಿ ಜಿಲ್ಲೆಗೆ ನೀರು ತರುವುದು ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ರಾಣೆಬೆನ್ನೂರು ತಾಲೂಕಿನ ಹನುಮಾಪುರ, ಹೊನ್ನತ್ತಿ, ಗುಡ್ಡದ ಅನವೇರಿ, ಗುಡ್ಡದ ಗುಡ್ಡಾಪುರ, ಖಜ್ಜರಿ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ತುಂಗಾ ಮೇಲ್ದಂಡೆ ಯೋಜನೆ ಮೂಲಕ ರಾಣೆಬೆನ್ನೂರಿಗೆ ನೀರು ತರುವ ಯೋಜನೆಯನ್ನು 2008 ರಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಸಭೆ ಮಾಡಿ, 2011 ರಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದ್ದೆ, ಆದರೆ, ಅದು ಅಸಾಧ್ಯವೆಂದು ಹೇಳಿದ್ದರು. ನಾಲ್ಕು ಬಾರಿ ಟೆಂಡರ್ ಕರೆದರೂ ಯಾರೂ ಬರಲಿಲ್ಲ. ಕಡೆಗೆ ನನ್ನ ಸ್ನೇಹಿತ ತಂತ್ರಜ್ಞಾನ ಬಳಸಿ 150 ಆಳದಲ್ಲಿ ಕೆನಾಲ್ ಮಾಡಿ ನೀರು ತಂದೆವು ಎಂದು ಹೇಳಿದರು.
ಸ್ವಾತಂತ್ರ್ಯ ಬಂದ ಮೇಲೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬ್ಯಾಡಗಿ ಕ್ಚೇತ್ರಕ್ಕೆ ಅತಿ ಹೆಚ್ಚು 2000 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳಬೇಕು.
ಪ್ರಧಾನಿ ನರೇಂದ್ರ ಮೋದಿಯವರು ಮನೆ ಮನೆಗೆ ನಲ್ಲಿ ನೀರು ಕೊಟ್ಟಿದ್ದಾರೆ. ಉಜ್ವಲ ಗ್ಯಾಸ್ ಕೊಟ್ಟಿದ್ದಾನೆ. ಬಡವರಿಗೆ ಮನೆ ಕಟ್ಟಿಸಿದ್ದಾರೆ. ಕೊವಿಡ್ ಸಂದರ್ಬದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಕೊಟ್ಟಿದ್ದಾರೆ. ಈಗಲೂ ಐದು ಕೆಜಿ ಅಕ್ಕಿ ನರೇಂದ್ರ ಮೋದಿಯವರೇ ಕೊಡುತ್ತಿದ್ದಾರೆ. ದೇಶದ 130. ಕೋಟಿ ಜನರಿಗೆ ಮೋದಿಯವರು ಉಚಿತ ಲಸಿಕೆ ಕೊಡಿಸಿದ್ದಾರೆ. ಅನ್ನ ಕೊಟ್ಟು, ನೀರು ಕೊಟ್ಟು ಜೀವ ಉಳಿಸಿದ ನರೇಂದ್ದ ಮೋದೊಯವರಿಗೆ ಕೃತಜ್ಞತೆ ಹೇಳುವ ಸಮಯ ಬಂದಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಅವರ ಋಣ ತೀರಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಜರಿದ್ದರು.
BIG NEWS: ‘ಪ್ರಜ್ವಲ್’ ಬೆನ್ನಲ್ಲೇ ‘ಕಾಂಗ್ರೆಸ್ ಶಾಸಕ’ನದ್ದು ಎನ್ನಲಾದ ‘ಅಶ್ಲೀಲ ವಿಡಿಯೋ’ ವೈರಲ್!
ಮೇ.7ರಂದು ‘ಲೋಕಸಭಾ ಚುನಾವಣೆ’ಗೆ ಎರಡನೇ ಹಂತದ ಮತದಾನ: ‘ವೇತನ ಸಹಿತ ರಜೆ’ ಘೋಷಣೆ