ಹುಬ್ಬಳ್ಳಿ: ಲೋಕಸಭಾ ಚುನಾವಣೆ ಕಾರಣಕ್ಕಾಗಿ ನಾವು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ನಾವು ಮಹಿಳೆಯರ ಜೊತೆಗೆ ದೌರ್ಜನ್ಯ ಎಸಗುವವರೊಂದಿಗೆ ಅಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಕಠೋರ ಶಿಕ್ಷೆಯಾಗಬೇಕು. ಅದಕ್ಕೆ ನಾವು ಬೆಂಬಲಿಸುತ್ತೇವೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಗರದಲ್ಲಿ ನಡೆದಂತ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಲೋಕಸಭಾ ಚುನಾವಣೆಗಾಗಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲಾಯಿತು. ಮೈತ್ರಿ ಮಾಡಿಕೊಂಡ ನಂತ್ರ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಹೊರ ಬಂದಿದೆ ಎಂದರು.
ಮಹಿಳೆಯರ ಜೊತೆ ದೌರ್ಜನ್ಯ ಎಸಗುವವರನ್ನು ನಾವು ರಕ್ಷಿಸುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಹೋಗಲು ಏಕೆ ಬಿಟ್ಟಿದ್ದೀರಿ? ಪ್ರಜ್ವಲ್ ರೇವಣ್ಣ ಅವರಿಗೆ ಕಠೋರ ಶಿಕ್ಷೆ ನೀಡಿ. ನಾವು ಬೆಂಬಲಿಸುತ್ತೇವೆ. ಆದರೇ ಇಂತಹ ಪ್ರಕರಣದಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ನಿಮಗೆ ಆಗದಿದ್ದರೇ ಹೇಳಿ, ಕರ್ನಾಟಕವನ್ನು ನಾವು ಸುರಕ್ಷಿತವಾಗಿ ಇಡುತ್ತೇವೆ ಎಂಬುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ಧಾಳಿ ನಡೆಸಿದರು.
ಮೇ.7ರಂದು ‘ಲೋಕಸಭಾ ಚುನಾವಣೆ’ಗೆ ಎರಡನೇ ಹಂತದ ಮತದಾನ: ‘ವೇತನ ಸಹಿತ ರಜೆ’ ಘೋಷಣೆ
‘ಸಿಂಬಲ್ ಲೋಡಿಂಗ್ ಯೂನಿಟ್’ ಸಂಗ್ರಹ, ನಿರ್ವಹಣೆಗೆ ಹೊಸ ‘ಪ್ರೊಟೋಕಾಲ್’ ಹೊರಡಿಸಿದ ಚುನಾವಣಾ ಆಯೋಗ