ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದೆ. ಕರ್ನಾಟಕದಲ್ಲೇ ಕೇಂದ್ರ ಗೃಹ ಸಚಿವರಿದ್ದರೂ ಇದರ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಈ ನಡುವೆ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮೊದಲು ಮಾಹಿತಿ ಸಿಕ್ಕಿದ್ದೇ ಅಮಿತ್ ಶಾಗೆ ಎಂಬುದಾಗಿ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಇಂದು ಎಕ್ಸ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್, ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ಕರ್ನಾಟಕದಲ್ಲಿದ್ದಾರೆ, ಪಾಪ,, ಅವರೇ ಹೇಳಿಕೊಂಡಂತೆ ಅವರಿಗೆ ನಾರಿಶಕ್ತಿ, ಮಾತೃಶಕ್ತಿಯ ಬಗ್ಗೆ ಬಹಳ ಗೌರವವಿದೆಯಂತೆ! ಅವರ ಪಕ್ಷ ಬಿಜೆಪಿಯೇ ಬೆಂಬಲಿಸಿದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರು ತೀವ್ರ ಆತಂಕ, ನೋವಿನಲ್ಲಿದ್ದಾರೆ, ನಾರಿಶಕ್ತಿಯ ಬಗ್ಗೆ ಗೌರವ ಇರುವ ಅಮಿತ್ ಶಾ ಅವರು ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆಯರನ್ನು ಭೇಟಿಯಾಗಿ ಧೈರ್ಯ ತುಂಬಿಲ್ಲ ಏಕೆ?ಎಂದು ಪ್ರಶ್ನಿಸಿದೆ.
ಜಾಗತಿಕ ಮಟ್ಟದಲ್ಲಿ ಈ ಪ್ರಕರಣ ಸದ್ದು ಮಾಡಿದ್ದರೂ ದೇಶದ ಗೃಹಸಚಿವರಾಗಿ ತಮ್ಮ ಹೊಣೆಗಾರಿಕೆ ಪ್ರದರ್ಶಿಸಿಲ್ಲವೇಕೆ? ಪ್ರಜ್ವಲ್ ರೇವಣ್ಣನ ಪ್ರಕರಣದ ಬಗ್ಗೆ ಮೊದಲು ಮಾಹಿತಿ ಸಿಕ್ಕಿದ್ದೇ ಅಮಿತ್ ಶಾ ಅವರಿಗೆ, ಹೀಗಿದ್ದೂ ನಿಷ್ಕ್ರೀಯರಾಗಿ ಕುಳಿತು ಮಹಿಳೆಯರ ಮಾನ ಹರಾಜು ಆಗಲು ಅವಕಾಶ ನೀಡಿದ್ದಕ್ಕೆ ಸಂತ್ರಸ್ತರನ್ನು ಸಂತೈಸುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಹೇಳಿದೆ.
ಕೇಂದ್ರ ಗೃಹಸಚಿವರಾದ @AmitShah ಅವರು ಕರ್ನಾಟಕದಲ್ಲಿದ್ದಾರೆ,
ಪಾಪ,, ಅವರೇ ಹೇಳಿಕೊಂಡಂತೆ ಅವರಿಗೆ ನಾರಿಶಕ್ತಿ, ಮಾತೃಶಕ್ತಿಯ ಬಗ್ಗೆ ಬಹಳ ಗೌರವವಿದೆಯಂತೆ!ಅವರ ಪಕ್ಷ ಬಿಜೆಪಿಯೇ ಬೆಂಬಲಿಸಿದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರು ತೀವ್ರ ಆತಂಕ, ನೋವಿನಲ್ಲಿದ್ದಾರೆ,
ನಾರಿಶಕ್ತಿಯ ಬಗ್ಗೆ ಗೌರವ ಇರುವ ಅಮಿತ್ ಶಾ ಅವರು…
— Karnataka Congress (@INCKarnataka) May 1, 2024
ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ದೇಶದ ಜನರ ತೀರ್ಮಾನ- ಬಿ.ವೈ.ವಿಜಯೇಂದ್ರ
ಇಂದಿನಿಂದ ಮೇ.5ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ‘ತೀವ್ರ ಬಿಸಿಗಾಳಿ’: ಹವಾಮಾನ ಇಲಾಖೆಯಿಂದ ‘ರೆಡ್ ಅಲರ್ಟ್’ ಘೋಷಣೆ