ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿ ಹೆಚ್ಚಾದಂತೆ, ಅತಿಸಾರ ಬೇದಿ, ಕಾಲರಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ಕೆಲ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದ್ದು, ಬೇಸಿಗೆ ಕಾಲದಲ್ಲಿ ಅತಿಸಾರ ಬೇದಿ / ಕಾಲರ ಸೋಂಕುಗಳ ಪುಕರಣಗಳು ಸಾಮಾನ್ಯವಾಗಿದ್ದು ಯಾವುದೇ Outbreakಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಆದರೂ ಸಹ Outbreak ಸಂಭವಿಸಿದಲ್ಲಿ ಅದನ್ನು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸಲು ಸಿದ್ಧರಾಗಿರುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಪ್ರಕರಣಗಳ ಹರಡುವಿಕೆಯನ್ನು ತಗ್ಗಿಸಲು ಮತ್ತು ಔಟ್ ಬ್ರೇಕ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಈ ಕೆಳಕಂಡಂತಿದೆ.
1. 24/7 ತಾತ್ಕಾಲಿಕ ಚಿಕಿತ್ಸಾಲಯಗಳ ಸ್ಥಾಪನೆ ಸಕ್ರಿಯ ಪ್ರಕರಣಗಳ ನಿರ್ವಹಣೆ ಮತ್ತು ತುರ್ತು ರೋಗ ನಿಯಂತ್ರಣಕ್ಕಾಗಿ 24/7 ತಾತ್ಕಾಲಿಕ ಚಿಕಿತ್ಸಾಲಯಗಳ ಸ್ಥಾಪನೆ, ತುರ್ತು ಔಷಧಿಗಳ (IV fluids, ORS, antibiotics etc) ದಾಸ್ತಾನುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು. ನಿರ್ಜಲೀಕರಣದ ಮಟ್ಟವನ್ನು ಆಧರಿಸಿ ಚಿಕಿತ್ಸೆಯನ್ನು ರೋಗಿಗಳಿಗೆ ವಿಳಂಬವಿಲ್ಲದಂತೆ ತಕ್ಷಣವೇ ಆರೋಗ್ಯ ಕೇಂದ್ರಗಳಲ್ಲಿ ನೀಡುವ ವ್ಯವಸ್ಥೆ ಮಾಡುವುದು.
2. Outbreak ಸಂದರ್ಭಗಳಲ್ಲಿ ಕುಡಿಯುವ ನೀರಿನ ಮಾದರಿಗಳ ತಪಾಸಣೆ:
ಎಲ್ಲಾ ಜಿಲ್ಲಾ ಸರ್ವೇಕ್ಷಣ ಘಟಕವು ಔಟ್ ಬ್ರೇಕ್ ಸಂದರ್ಭಗಳಲ್ಲಿ ಕುಡಿಯುವ ನೀರಿನ ಮೂಲಗಳಲ್ಲಿ Coliformಗಳ ಪತ್ತೆಹಚ್ಚುವಿಕೆಗಾಗಿ H2S ವಿಧಾನ ಮತ್ತು ಎಂ. ಪಿ .ಎನ್ Most Probable number (MPN) ಪರೀಕ್ಷೆಗಳನ್ನು ನಡೆಸುವುದು. ಹಾಗೂ ಪ್ಯಾಥೋಜನ್ ಗಳ ಪತ್ತೆ ಹಚ್ಚುವಿಕೆಗಾಗಿ 10-15% ಶಂಕಿತ ಪುಕರಣಗಳಿಂದ Stool culture and sensitivity ಪರೀಕ್ಷೆಯನ್ನು ಜಿಲ್ಲಾ ಸಾರ್ವಜನಿಕ ಆರೋಗ್ಯ ಪುಯೋಗಾಲಯ / ಜಿಲ್ಲಾ ಸರ್ವೇಕ್ಷಣ ಪ್ರಯೋಗಾಲಯಗಳಲ್ಲಿ ಮಾಡುವುದು.
3. ಕಣ್ಣಾವಲು ಮತ್ತು ವರದಿ : ಎಲ್ಲಾ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು ಯಾವುದೇ ಮಲದ ಮಾದರಿಯಲ್ಲಿ ಹ್ಯಾಂಗಿಂಗ್ ಡ್ರಾಪ್ ಪಾಸಿಟಿವ್ ಎಂದು ವರದಿಯಾದ ಕೂಡಲೇ ಸರ್ವೇಕ್ಷಣ ಚಟುವಟಿಕೆಗಳನ್ನು ಪ್ರಾರಂಭಿಸುವುದು ಮತ್ತು IHIPಪೋರ್ಟಲ್ ನಲ್ಲಿ ವರದಿಯಾಗುವಂತೆ ಕ್ರಮ ವಹಿಸುವುದು. ಮುಂದುವರೆದು ಸದರಿ ಪ್ರಕರಣದ ಆರೋಗ್ಯ ಸ್ಥಿತಿ ಸ್ಥಿರಗೊಳ್ಳುವವರೆಗೂ ಅನುಸರಿಸಿ ಮಾಹಿತಿಯನ್ನು ರಾಜ್ಯಮಟ್ಟಕ್ಕೆ ವರದಿ ಸಲ್ಲಿಸುವುದು.
4. ಕ್ಲಸ್ಟರ್/ Outbreak : ಅತಿಸಾರ/ಕಾಲರಾ ಕಾಯಿಲೆಯ ಕ್ಲಸ್ಟರ್/Outbreak ವರದಿಯಾದಲ್ಲಿ ತಕ್ಷಣವೇ ಭಾರತ ಸರ್ಕಾರದ IHIPಪೋರ್ಟಲ್ ನಲ್ಲಿ “ಇವೆಂಟ್ ಅಲರ್ಟ್” ಜನರೇಟ್ ಮಾಡಿ ಔಟ್ ನಿರ್ವಹಣೆಯ ಶಿಷ್ಟಾಚಾರದ ಅನುಸಾರ ಕ್ರಮ ವಹಿಸುವುದು. -ಮನೆ-ಮನೆಗೆ ಭೇಟಿ ನೀಡಿ ಸಕ್ರಿಯ ಸರ್ವೇಕ್ಷಣೆಯನ್ನು ಬಲಪಡಿಸುವುದು.
5. ಸಾಮರ್ಥ್ಯ ವೃದ್ಧಿ: ಕೇಸ್ ಮ್ಯಾನೇಜ್‌ಮೆಂಟ್, ಸೋಂಕು ನಿಯಂತ್ರಣ ಕ್ರಮಗಳ ಕುರಿತು ಕ್ಷೇತ್ರ ಮಟ್ಟದ ಆರೋಗ್ಯ ಕಾರ್ಯಕರ್ತರಿಗೆ Hands on ತರಬೇತಿ ನೀಡುವುದು.
6. ಅಂತರ ಇಲಾಖೆ ಸಮನ್ವಯ ಮತ್ತು ಸಹಯೋಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪುರಸಭೆ, ನಗರ ಸಭೆ ಮತ್ತು ಇತರೆ ಸಂಬಂಧಿತ ಸ್ಥಳೀಯ ಇಲಾಖೆಯಗಳೊಂದಿಗೆ ಸಭೆಗಳನ್ನು ನಡೆಸಿ, ಸಾರ್ವಜನಿಕರಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಕುಡಿಯುವ ನೀರಿನ ಮೂಲಗಳನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಆಹಾರ ಸುರಕ್ಷತಾ ಅಧಿಕಾರಿಗಳು ಕ್ಯಾಂಟೀನ್ ಗಳು, ಮದುವೆ ಸಮಾರಂಭಗಳು, ಹಾಗೂ ಸಾಮೂಹಿಕ ಅಡುಗೆ ಮಾಡುವ ಸ್ಥಳ, ಇತ್ಯಾದಿಗಳಿಗೆ ನಿಯಮಿತವಾಗಿ ಮೇಲ್ವಿಚಾರಣೆಗೆ ಭೇಟಿ ನೀಡಿ ನೀರು ಮತ್ತು ಆಹಾರ ಮಾದರಿಗಳ ಸಂಗ್ರಹಣೆ ಮತ್ತು ಪರೀಕ್ಷೆಗೊಳಪಡಿಸುವಿಕೆಯಿಂದ ಆಹಾರ ಸುರಕ್ಷತೆ ನಿಯಮಗಳನ್ನು ಜಾರಿಗೊಳಿಸಿ ಆಹಾರ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
7. ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಮಾಹಿತಿ ಮತ್ತು ಸಂವಹನ : ಕಾಲರಾ ಅಥವಾ ತೀವುವಾದ ಅತಿಸಾರ ಕಾಯಿಲೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು. ಓ ಆರ್ ಎಸ್ ತಯಾರಿಸಿ ಬಳಸುವ ವಿಧಾನ, ವೈಯುಕ್ತಿಕ ಸ್ವಚ್ಛತೆ, ಕೈ ತೊಳೆಯುವುದು, ಕಾಯಿಸಿ ಆರಿಸಿದ ನೀರನ್ನು ಕುಡಿಯುವುದು, ಮನೆಯ ಸುತ್ತಮುತ್ತಲು ಶುಚಿತ್ರವನ್ನು ಕಾಪಾಡಿಕೊಳ್ಳುವುದು ಹಾಗೂ ಇತರೆ ರೋಗ ನಿಯಂತ್ರಣದ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಮಾಹಿತಿ ಮತ್ತು ಸಂವಹನ ನೀಡುವುದು. 8. ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ: ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ತಾಲೂಕು/ಜಿಲ್ಲಾ ಮಟ್ಟದ ತ್ವರಿತ ಪುಕ್ಕಿಯ ತಂಡದ ವರದಿಯನ್ನು ಮೇಲ್ವಿಚಾರಣೆ ಮಾಡಿ ಮತ್ತು ಪ್ರತಿಕ್ರಿಯ ಮೇಲೆ ಅಗತ್ಯವಿರುವಂತೆ ಸೂಕ್ತ ಕ್ರಮ ಕೈಗೊಳ್ಳುವುದು. ದೈನಂದಿನ ವರದಿಯನ್ನು ರಾಜ್ಯಮಟ್ಟಕ್ಕೆ ನಿಯಮಿತವಾಗಿ ಸಲ್ಲಿಸುವುದು ಮತ್ತು IHIPಪೋರ್ಟಲ್ ನಲ್ಲಿ ವರದಿಗಳು ನಮೂದಾಗುವಂತೆ ಕ್ರಮ ವಹಿಸುವಂತೆ ತಿಳಿಸಿದೆ.
BIG NEWS: ನಮಗೆ ತೊಂದ್ರೆ ಕೊಟ್ರೆ ‘ಸೂಸೈಡ್’ ಮಾಡಿಕೊಳ್ತೀವಿ: SIT ಮುಂದೆ ಹೇಳಿಕೆಗೆ ‘ಸಂತ್ರಸ್ತೆ’ಯರು ಹಿಂದೇಟು
BREAKING: ಅಶ್ಲೀಲ ವೀಡಿಯೋ ಕೇಸ್: SIT ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡಿ– ಪ್ರಜ್ವಲ್ ರೇವಣ್ಣ ಮನವಿ