ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದಿಂದ ಚುರುಕುಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ನಮಗೆ ತೊಂದ್ರೆ ಕೊಡಬೇಡಿ. ತೊಂದ್ರೆ ಕೊಟ್ರೆ ನಾವು ಆತ್ಮಹತ್ಯೆ ಮಾಡಿಕೊಳ್ತೀವಿ ಎಂಬುದಾಗಿ ವೀಡಿಯೋದಲ್ಲಿರುವಂತ ಸಂತ್ರಸ್ತೆಯರು ಹೇಳಿಕೆ ನೀಡೋದಕ್ಕೆ ಹಿಂದೇಟು ಹಾಕುತ್ತಿರೋದಾಗಿ ತಿಳಿದು ಬಂದಿದೆ.
ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಎಸ್ಐಟಿಯಿಂದ ತನಿಖೆ ನಡೆಸಲಾಗುತ್ತಿದೆ. ಎಸ್ಐಟಿಯ ತನಿಖಾ ತಂಡ ದೂರವಾಣಿಯ ಮೂಲಕ ದೂರುದಾರೆ ಸೇರಿದಂತೆ ವೀಡಿಯೋದಲ್ಲಿರುವಂತ ಮಹಿಳೆಯರನ್ನು ಸಂಪರ್ಕಿಸಿ ಹೇಳಿಕೆ ನೀಡೋದಕ್ಕೆ ಮನವೊಲಿಕೆ ಮಾಡೋ ಕಾರ್ಯದಲ್ಲಿ ನಿರತವಾಗಿದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಹೇಳಿಕೆ ನೀಡುವಂತೆ ಎಸ್ಐಟಿ ತನಿಖಾ ತಂಡ ಮಾಹಿತಿ ಕೋರಿದ್ರೇ, ನಮಗೆ ತೊಂದ್ರೆ ಕೊಟ್ಟರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂಬುದಾಗಿ ಹೇಳುತ್ತಿರೋದಾಗಿ ತಿಳಿದು ಬಂದಿದೆ.
ದೂರುದಾರೆ ಬಿಟ್ಟು ಉಳಿದವರು ಪ್ರತಿಕ್ರಿಯೆ ನೀಡೋದಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ವೀಡಿಯೋದಲ್ಲಿರುವಂತ ಮಹಿಳೆಯರನ್ನು ಸಂಪರ್ಕಿಸಿ ಎಸ್ಐಟಿ ಹೇಳಿಕೆ ಪಡೆಯೋದಕ್ಕೆ ಪ್ರಯತ್ನಿಸಿದ್ರೂ ಕೂಡ, ಸಂತ್ರಸ್ತೆಯರು ಮಾತ್ರ ಏನು ಹೇಳಲ್ಲ. ಏನು ಕೇಳ್ಬೇಡಿ ಎಂಬುದಾಗಿ ಹಠ ಹಿಡಿದ್ದಾರೆ ಎನ್ನಲಾಗಿದೆ. ಅಲ್ಲದೇ ನಾವು ದೂರು ಕೊಟ್ಟಿಲ್ಲ. ನಮ್ಮನ್ನು ಏನು ಕೇಳ್ಬೇಡಿ ಎಂಬುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಸಹಪಾಠಿಯಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ 10ನೇ ತರಗತಿ ವಿದ್ಯಾರ್ಥಿ ಬಂಧನ
‘ಪ್ರಜ್ವಲ್ ಅಶ್ಲೀಲ ವೀಡಿಯೋ’ ಬಿಡುಗಡೆಗೆ ‘ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ’ಯೇ ಕಾರಣ- ರಮೇಶ್ ಬಾಬು