ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ನೋಟಿಸ್ ನೀಡಿದೆ.
ಈ ನಡುವೆ ಸದ್ಯ ಜರ್ಮನಿಯಲ್ಲಿ ಪ್ರಜ್ವಲ್ ರೇವಣ್ಣ ನವರು ಇದ್ದು ಸದ್ಯ ಅವರು ಮೇ ರಂದು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಜ್ವಲ್ ಅವರ ತಂದೆ ಮತ್ತು ಶಾಸಕ ಹೆಚ್.ಡಿ ರೇವಣ್ಣನವರು ಮಾಹಿತಿ ನೀಡಿದ್ದಾರೆ.ಇನ್ನೂ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿ ಇರುವುದರಿಂದ ಸದ್ಯ ಅವರು ವಿಚಾರಣೆಗೆ ಬರಲು ಸಾಧ್ಯವಾಗದೇ ಇರುವುದರಿಂದ ಅವರ ಪರವಾಗಿ ವಕೀಲರು ಹೆಚ್ಚಿನ ಕಾಲವನ್ನು ಕೇಳಲಿದ್ದಾರೆ ಎನ್ನಲಾಗಿದೆ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಎಚ್‌ಡಿ ರೇವಣ್ಣಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ 24 ಗಂಟೆಗಳಲ್ಲಿ ತನಿಖಾ ತಂಡದ ಮುಂದೆ ಹಾಜರಾಗಲು ಸೂಚನ ನೀಡಿದೆ. ಇದಲ್ಲದೇ ಒಂದು ವೇಳೆ ಹಾಜರಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡ ನೀಡಿದೆ ಎನ್ನಲಾಗಿದೆ.