ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ರಾಜ್ಯ ಸರ್ಕಾರ ಸರಿಯಾಗೇ ನಿಭಾಯಿಸುತ್ತಿದೆ. ಈ ವಿಷಯದಲ್ಲಿ ಕೇಂದ್ರ ಮಹಿಳಾ ಆಯೋಗ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂಬುದಾಗಿ ಶಾಸಕ ಸೌಮ್ಯಾರೆಡ್ಡಿ ಪ್ರಶ್ನಿಸಿದ್ದಾರೆ.
ಇಂದು ಎಕ್ಸ್ ಮಾಡಿರುವಂತ ಅವರು, ರಾಜ್ಯ ಮಹಿಳಾ ಆಯೋಗ ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಸ್ಪಂದಿಸಿದೆ. ರಾಜ್ಯ ಸರ್ಕಾರ ಘಟನೆಯ ಗಂಭೀರತೆ ಅರಿತು ತಕ್ಷಣವೇ ಎಸ್ ಐಟಿ ರಚಿಸಿ ಪ್ರಕರಣದ ತನಿಖೆ ಆರಂಭಿಸಿದೆ. ಕೇಂದ್ರ ಮಹಿಳಾ ಆಯೋಗ ಎಲ್ಲಿದೆ? ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಎಂದು ಕೇಳಿದ್ದಾರೆ.
ರಾಜ್ಯ ಮಹಿಳಾ ಆಯೋಗ ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಸ್ಪಂದಿಸಿದೆ.
ರಾಜ್ಯ ಸರ್ಕಾರ ಘಟನೆಯ ಗಂಭೀರತೆ ಅರಿತು ತಕ್ಷಣವೇ ಎಸ್ ಐಟಿ ರಚಿಸಿ ಪ್ರಕರಣದ ತನಿಖೆ ಆರಂಭಿಸಿದೆ.
ಕೇಂದ್ರ ಮಹಿಳಾ ಆಯೋಗ ಎಲ್ಲಿದೆ? ಕೇಂದ್ರ ಸರ್ಕಾರ ಏನು ಮಾಡುತ್ತಿದೆ?#BetiBachaoFromBJP #ಮಹಿಳಾ_ಪೀಡಕ_ಬಿಜೆಪಿ #PrajwalRevanna
— Sowmya | ಸೌಮ್ಯ (@Sowmyareddyr) April 30, 2024
ಮತ್ತೊಂದೆಡೆ ರಾಜಕೀಯ ಲಾಭಕ್ಕಾಗಿ ಎಷ್ಟು ಸುಳ್ಳು ಬೇಕಾದರು ಹೇಳುವ ಮೋದಿಯವರು, ಹಾಸನ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ..? ಪ್ರಜ್ವಲ್ ರೇವಣ್ಣ ಪರ ಮತ ಯಾಚಿಸಿದ್ದ ಮೋದಿಯವರು, ಆ ಸಂಸದನಿಂದ ಮಹಿಳೆಯರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಾಗ ಖಂಡಿಸುವ ಮನಸ್ಸು ತೋರಲಿಲ್ಲ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಮೋದಿಯವರೇ ಕರ್ನಾಟಕವನ್ನ ಕಡೆಗಣಿಸಿದ್ದಲ್ಲದೇ ಈಗ ಬೆಂಗಳೂರಿಗೆ ಕೇಡು ಬಯಸಲು ಹೋರಟಿದ್ದೀರಾ..?ಐಟಿ ಸಿಟಿ ಬೆಂಗಳೂರನ್ನ ಟ್ಯಾಂಕರ್ ಸಿಟಿ ಅಂತಾ ಒಬ್ಬ ಪ್ರಧಾನಿಯಾದವರು ಹೇಳಬಹುದೇ..? ಬೆಂಗಳೂರನ್ನ ಏನು ಮೋದಿಯವರು ಐಟಿ ಸಿಟಿಯನ್ನಾಗಿ ಮಾಡಿದ್ರಾ.? ಎಂದು ಪ್ರಶ್ನಿಸಿದ್ದಾರೆ.
ಬರ ಪರಿಸ್ಥಿತಿಯನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಟ್ಯಾಂಕರ್ ಮೂಲಕ ಬೆಂಗಳೂರಿನ ಜನರಿಗೆ ನೀರು ಕೊಡದೇ ಇನ್ನೇನು ಮಾಡಬೇಕಿತ್ತು. ಉದ್ಯೋಗ ಕೊಡಲ್ಲ ಹೋಗಿ ಪಕೋಡ ಮಾರಿ ಎಂದು ನೀವು ಹೇಳಿದ ರೀತಿಯಲ್ಲಿ ನಾವು ಹೇಳಲಾರೆವು..ಬಡಜನರ ನೋವು ಸಂಕಷ್ಟಗಳಿಗೆ ಸ್ಪಂದಿಸಲು ಕಾಂಗ್ರೆಸ್ ಸದಾ ಚಿಂತಿಸುತ್ತದೆ ಎಂದಿದ್ದಾರೆ.
ರಾಜಕೀಯ ಲಾಭಕ್ಕಾಗಿ ಎಷ್ಟು ಸುಳ್ಳು ಬೇಕಾದರು ಹೇಳುವ ಮೋದಿಯವರು, ಹಾಸನ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ..?
ಪ್ರಜ್ವಲ್ ರೇವಣ್ಣ ಪರ ಮತ ಯಾಚಿಸಿದ್ದ ಮೋದಿಯವರು, ಆ ಸಂಸದನಿಂದ ಮಹಿಳೆಯರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಾಗ ಖಂಡಿಸುವ ಮನಸ್ಸು ತೋರಲಿಲ್ಲ.
ಮೋದಿಯವರೇ ಕರ್ನಾಟಕವನ್ನ ಕಡೆಗಣಿಸಿದ್ದಲ್ಲದೇ ಈಗ ಬೆಂಗಳೂರಿಗೆ ಕೇಡು… pic.twitter.com/NWVytQ2Wph
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 29, 2024
ವಸೂಲಿ ಮಾಡಿದ ‘ಬಡ್ಡಿ’ ಗ್ರಾಹಕರಿಗೆ ಹಿಂದಿಗಿಸಿ ; ಬ್ಯಾಂಕುಗಳಿಗೆ ‘RBI’ ಖಡಕ್ ಎಚ್ಚರಿಕೆ