ಬೆಂಗಳೂರು: 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಈಗಾಗಲೇ ಅನೇಕರು ಅರ್ಜಿಯನ್ನು ಸಲ್ಲಿಸಿದ್ದೀರಿ. ಅರ್ಜಿ ಸಲ್ಲಿಸಿದ ನಂತ್ರ ಶುಲ್ಕ ಪಾವತಿಸಿದಂತ ಅನೇಕರು ಕೆಲ ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕೆ ಕೆಇಎ ಪರಿಹಾರ ನೀಡಿದ್ದು, ಆ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಇಂದು ಎಕ್ಸ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, VAO ಶುಲ್ಕ ಪಾವತಿಗೆ ಪರಿಹಾರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದ ನಂತರವೂ ಪಾವತಿ ಬಗ್ಗೆ ಅಪ್ ಡೇಟ್ ಆಗದಿದ್ದರೆ ಈ ವಿಳಾಸಕ್ಕೆ ಇ-ಮೇಲ್ (vaopayment@gmail.com) ಮಾಡುವುದು. ಅದಾದ ಎರಡು ದಿನಗಳ ನಂತರ ಆಪ್ ಡೇಟ್ ಆಗಲಿದೆ. ಬಳಿಕ ಅದರ ಪ್ರಿಂಟ್ ತೆಗೆದುಕೊಳ್ಳಬಹುದು ಎಂದಿದೆ.
VAO ಶುಲ್ಕ ಪಾವತಿಗೆ ಪರಿಹಾರ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದ ನಂತರವೂ ಪಾವತಿ ಬಗ್ಗೆ ಅಪ್ ಡೇಟ್ ಆಗದಿದ್ದರೆ ಈ ವಿಳಾಸಕ್ಕೆ ಇ-ಮೇಲ್ (vaopayment@gmail.com) ಮಾಡುವುದು. ಅದಾದ ಎರಡು ದಿನಗಳ ನಂತರ ಆಪ್ ಡೇಟ್ ಆಗಲಿದೆ. ಬಳಿಕ ಅದರ ಪ್ರಿಂಟ್ ತೆಗೆದುಕೊಳ್ಳಬಹುದು.@CMofKarnataka— KEA (@KEA_karnataka) April 30, 2024
ಅಂದಹಾಗೆ ದಿನಾಂಕ 05-04-2024ರ ಇಂದಿನಿಂದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. ದಿನಾಂಕ 04-05-2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದಿನಾಂಕ 07-05-2024 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ. http://kea.kar.nic.in ಈ ವೆಬ್ ಸೈಟ್ ವಿಳಾಸದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
BREAKING: ದಲಿತ ನಾಯಕ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ, ಇನ್ನೂ ನೆನಪು ಮಾತ್ರ
ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ, ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ