ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ ಪ್ರಕರಣದ ವಿವಾದದ ನಡುವೆಯೇ ಕಾಂಗ್ರೆಸ್ ಪಕ್ಷವು ತನ್ನ ಕುಟುಂಬದ ವರ್ಚಸ್ಸನ್ನು ಹಾಳುಮಾಡಲು ಸತ್ಯಗಳನ್ನು ತಿರುಚುತ್ತಿದೆ ಎಂದು ಜೆಡಿಎಸ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಇದೇ ವೇಳೆ ಅವರು ಮಾತನಾಡಿ, ಈ ಮಾತನ್ನು ಚಿಕ್ಕಪ್ಪನಾಗಿ ಹೇಳುತ್ತಿಲ್ಲ. ಸಾಮಾನ್ಯ ವ್ಯಕ್ತಿಯಾಗಿ ಹೇಳುತ್ತಿದ್ದೇನೆ. ಇದು ನಾಚಿಕೆಗೇಡಿನ ವಿಷಯ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಅವರು ಕಿಡಿಕಾರಿದ್ದಾರೆ.
“ಇದು ನಮ್ಮ ಕುಟುಂಬದ ವರ್ಚಸ್ಸನ್ನು ಹಾಳುಮಾಡಲು ಕಾಂಗ್ರೆಸ್ನ ಕುತಂತ್ರವಾಗಿದೆ. ದೇವೇಗೌಡರ ಅಥವಾ ನನ್ನ ಪಾತ್ರವೇನು? ಈ ಎಲ್ಲ ವಿಷಯಗಳಿಗೆ ನಾವು ಜವಾಬ್ದಾರರಲ್ಲ. ಇದು ಪ್ರಜ್ವಲ್ ರೇವಣ್ಣ ಅವರ ವೈಯಕ್ತಿಕ ವಿಚಾರ. ನಾನು ಅವರೊಂದಿಗೆ (ಪ್ರಜ್ವಲ್ ರೇವಣ್ಣ) ಸಂಪರ್ಕದಲ್ಲಿಲ್ಲ. ಅವರನ್ನು ಕಾನೂನಿನ ಮುಂದೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ. ನೈತಿಕವಾಗಿ ನಾವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ” ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.