ಬೆಂಗಳೂರು : 2024-25ನೇ ಸಾಲಿನ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಪಟ್ಟಂತೆ 2024-25ನೇ ಶೈಕ್ಷಣಿಕ ವರ್ಷದಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಿದ್ದು, ಫಲಿತಾಂಶ ಸಹ ಪ್ರಕಟಗೊಂಡಿರುತ್ತದೆ. ಈ ಸಂಬಂಧ ಪ್ರತಿ ಆದರ್ಶ ವಿದ್ಯಾಲಯಕ್ಕೆ ಕರ್ನಾಟಕ ಮೀಸಲಾತಿ ಅನ್ವಯ ಪ್ರತಿ ಶಾಲೆಗೆ 120 ರಂತೆ ಸೀಟುಗಳ ಪಟ್ಟಿ ಸಿದ್ಧಪಡಿಸಿ ಸಂಬಂಧಿಸಿದ ಮುಖ್ಯ ಶಿಕ್ಷಕರಿಗೆ www.vidyavahini.karnataka.gov.in , ಶಾಲೆಯ ಆವರಣದಲ್ಲಿ 3 ರಿಂದ 4 ಸ್ಥಳಗಳಲ್ಲಿ ಪ್ರಕಟಿಸಬೇಕು. ಅಗತ್ಯ ದಾಖಲೆಗಳನ್ನು ಪಡೆದು ಕೆಳಗಿನ ವೇಳಾಪಟ್ಟಿಯನ್ವಯ ದಾಖಲಾತಿಯನ್ನು ಮಾಡಿಕೊಳ್ಳಲು ಆದರ್ಶ ವಿದ್ಯಾಲಯಗಳ ಮುಖ್ಯ ಶಿಕ್ಷಕರಿಗೆ ಅನುಮತಿಸಿ ಆದೇಶಿಸಿದೆ.
2024-25ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿಯ ದಾಖಲಾತಿಯ ಮಾರ್ಗಸೂಚಿಯ ಸುತ್ತೋಲೆ ದಿನಾಂಕ 16.01.2024 ಅನ್ನು ಕಡ್ಡಾಯವಾಗಿ ಆದರ್ಶ ವಿದ್ಯಾಲಯಗಳ ಮುಖ್ಯ ಶಿಕ್ಷಕರು ಪಾಲಿಸುವುದು.