ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದ ಕಾರಣ, ತಾಯಿ-ಮಗಳ ನಡುವೆ ವಾಗ್ವಾದ ಉಂಟಾಗಿದೆ. ವಾಗ್ವಾದ ತಾರಕಕ್ಕೇರಿದ ಪರಿಣಾಮ ತಾಯಿ-ಮಗಳು ಪರಸ್ವರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ಘಟನೆಯಲ್ಲಿ ಪುತ್ರಿ ತೀವ್ರ ರಕ್ತಸ್ತ್ರಾವದೊಂದಿಗೆ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಹಾಗೂ ಪುತ್ರಿಯ ನಡುವೆ ವಾಗ್ವಾದ ಉಂಟಾಗಿದೆ. ವಾಗ್ವಾದ ತರಾಕಕ್ಕೇರಿ ತಾಯಿ ಪದ್ಮಜಾ ಹಾಗೂ ಪುತ್ರಿ ಸಾಹಿತಿ(18) ಪರಸ್ಪರ ಚಾಕುವಿನಿಂದ ಇರಿದಾಡಿಕೊಂಡಿದ್ದಾರೆ.
ಪದ್ಮಜಾಗೆ 4-5 ಬಾರಿ ಪುತ್ರಿ ಸಾಹಿತಿ ಇರಿದಿದ್ದರೇ, ಪ್ರತಿಯಾಗಿ ಪದ್ಮಜಾ ಪುತ್ರಿಗೆ ಇರಿದ ಪರಿಣಾಮ ತೀವ್ರ ರಕ್ತ ಸ್ತ್ರಾವದೊಂದಿಗೆ ಮನೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಸದ್ಯ ತಾಯಿ ಪದ್ಮಜಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಿವಾಸಪ್ರಸಾದ್ ಪಾರ್ಥಿವ ಶರೀರಕ್ಕೆ ಸಿಎಂ ಸಿದ್ಧರಾಮಯ್ಯ ಅಂತಿಮ ನಮನ: ನಾಳೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಕೋವಿಡ್ ಗುಣಮುಖ ಸುಳ್ಳು ಹೇಳಿಕೆ ಮೂಲಕ ‘ಬಾಬಾ ರಾಮದೇವ್’ ರೆಡ್ ಲೈನ್ ದಾಟಿದ್ದಾರೆ : IMA ಅಧ್ಯಕ್ಷ