Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲೇ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ

05/03/2026 7:28 PM

BIGG NEWS : ಯುದ್ಧದ ಸಮಯದಲ್ಲಿ ಇರಾನ್ ಮಹತ್ವದ ಹೇಳಿಕೆ ; ತೈಲ ಆಮದಿನಲ್ಲಿ ಭಾರತಕ್ಕೆ ಬಿಗ್ ರಿಲೀಫ್.!

05/03/2026 7:22 PM

ಮೊರ್ಗನ್ ಸ್ಟಾನ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: ಜಾಗತಿಕವಾಗಿ 2,500 ಉದ್ಯೋಗ ಕಡಿತ- ವರದಿ | Morgan Stanley Layoffs

05/03/2026 7:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀನಿವಾಸಪ್ರಸಾದ್ ಪಾರ್ಥಿವ ಶರೀರಕ್ಕೆ ಸಿಎಂ ಸಿದ್ಧರಾಮಯ್ಯ ಅಂತಿಮ ನಮನ: ನಾಳೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
KARNATAKA

ಶ್ರೀನಿವಾಸಪ್ರಸಾದ್ ಪಾರ್ಥಿವ ಶರೀರಕ್ಕೆ ಸಿಎಂ ಸಿದ್ಧರಾಮಯ್ಯ ಅಂತಿಮ ನಮನ: ನಾಳೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

By kannadanewsnow0929/04/2024 10:07 PM

ಮೈಸೂರು: ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ನಿಧನಕ್ಕೆ ಗೌರವ ಸೂಚಕವಾಗಿ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು . ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಚಾಮರಾಜನಗರದ ಹಾಲಿ ಸಂಸದರಾಗಿದ್ದ ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ಪ್ರಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

15 ದಿನಗಳ ಹಿಂದೆ ಭೇಟಿಯಾಗಿದ್ದಾಗ ರಾಜಕೀಯ ಮಾತನಾಡಿದೆವು. ರಾಜಕೀಯದಲ್ಲಿ ಸಂತೋಷದ ಕ್ಷಣ ಬಹಳ ಕಡಿಮೆ. ಹೋರಾಟ ಮಾಡುವಾಗ ಸಂತೋಷದ ಕ್ಷಣಗಳು ಕಡಿಮೆ. ಬಹಳ ವರ್ಷ ಗಳ ನಂತರ ಭೇಟಿಯಾಗಿದ್ದ ಕಾರಣ ಸಂತೋಷವಾಗಿದೆ ಎಂದು ಹೇಳಿರಬಹುದು ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೊತೆಯಲ್ಲಿಯೇ ರಾಜಕಾರಣ ಮಾಡಿದವರು, ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಲ್ಲಿ ಒಟ್ಟಿಗಿದ್ದವರನ್ನು ಕಳೆದುಕೊಂಡಾಗ ಬಹಳ ದುಃಖವಾಗುತ್ತದೆ ಎಂದರು.

ದಮನಿತರ ಧ್ವನಿಯಾಗಿ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ

ಶ್ರೀನಿವಾಸ ಪ್ರಸಾದ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬ ವರ್ಗದವರೊಂದಿಗೆ ಮಾತನಾಡಿದ್ದೆ.ಆದರೆ ಅಂಗಾಂಗ ವೈಫಲ್ಯದಿಂದಾಗಿ ಅವರ ನಿಧನವಾಗಿದೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. 2013 ರಲ್ಲಿ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಯಾಗಿ ಹಲವು ವರ್ಷಗಳ ಕಾಲ ಆರೋಗ್ಯವಾಗಿದ್ದರು. ಶ್ರೀನಿವಾಸ ಪ್ರಸಾದ್ ಹಾಗೂ ನಾನು ಒಂದೇ ವಯೋಮಾನದವರು. ನೇರ ನುಡಿಯ ಶ್ರೀನಿವಾಸ್ ಪ್ರಸಾದ್ ಅವರು ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಟ ನಡೆಸಿದವರು. ಡಾ. ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದರು. ದಮನಿತರ ಧ್ವನಿಯಾಗಿ ಅಂಬೇಡ್ಕರ್ ರವರ ತತ್ವಾದರ್ಶಗಳು ಹಾದಿಯಲ್ಲಿ ನಡೆದವರು. ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಶ್ರೀನಿವಾಸ್ ಪ್ರಸಾದ್ ರವರು 50 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಸೋಲು ಹಾಗೂ ಗೆಲುವನ್ನು ಕಂಡವರು. ಕಾರಣಾಂತರಗಳಿಂದ ಇತ್ತೀಚೆಗೆ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದರು ಎಂದರು.

ಕರ್ನಾಟಕ ರಾಜಕಾರಣಕ್ಕೆ ನಷ್ಟವಾಗಿದೆ

ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಕೇಳಿದಾಗ ನಾನು ರಾಜಕೀಯದಿಂದ ನಿವೃತ್ತನಾಗಿದ್ದೇನೆ ಎಂದು ಹೇಳಿದ್ದರು. ಸ್ನೇಹಿತರಿಗೆ ಹೇಳುತ್ತೇನೆ., ಆದರೆ ಜೆಡಿಎಸ್ ಗಾಗಲೀ ಕಾಂಗ್ರೆಸ್ ಗಾಗಲಿ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು.50 ವರ್ಷಗಳ ಕಾಲ ಹೋರಾಟದ ಬದುಕು ನಡೆಸಿದ ಅವರಂಥವರು ನಮ್ಮಮಧ್ಯೆ ಇಲ್ಲ.
ಅವರ ಸಾವಿನಿಂದ ಕರ್ನಾಟಕ ರಾಜಕಾರಣಕ್ಕೆ ನಷ್ಟವಾಗಿದೆ ಎಂದು ಹೇಳಿದರು.

ಸ್ಮಾರಕ ನಿರ್ಮಾಣದ ಬಗ್ಗೆ ಚರ್ಚೆ

ಸಕ್ಕರೆ ಕಾಯಿಲೆ ಇರುವುದರಿಂದ ಕಾಲಿನ ಗಾಯ ವಾಸಿ ಮಾಡಿಕೊಳ್ಳಲು ಸಲಹೆ ನೀಡಿದ್ದೆ.ಗಾಯ ವಾಸಿಯಾಗದೆ ತೊಂದರೆಯಾಯಿತು ಎಂದರು. ಕುಟುಂಬಸ್ಥರು ಸ್ಮಾರಕ ನಿರ್ಮಾಣದ ಬಗ್ಗೆ ಮಾತನಾಡಿದರೆ ಎಂಬ ಪ್ರಶ್ನೆಗೆ ಉತ್ತರಿಸಿ, ಅಂತ್ಯಕ್ರಿಯೆ ಮುಗಿಸ ನಂತರ ಚರ್ಚೆ ಮಾಡುವುದಾಗಿ ತಿಳಿಸಿರುವುದಾಗಿ ಹೇಳಿದರು.

ಒಬ್ಬ ಸ್ನೇಹಿತನನ್ನು, ಕಳೆದುಕೊಂಡಿರುವುದು ಬಹಳ ದುಃಖ ತಂದಿದೆ.ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಕೋವಿಡ್ ಗುಣಮುಖ ಸುಳ್ಳು ಹೇಳಿಕೆ ಮೂಲಕ ‘ಬಾಬಾ ರಾಮದೇವ್’ ರೆಡ್ ಲೈನ್ ದಾಟಿದ್ದಾರೆ : IMA ಅಧ್ಯಕ್ಷ

Share. Facebook Twitter LinkedIn WhatsApp Email

Related Posts

ನಾಳೆ ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲೇ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ

05/03/2026 7:28 PM1 Min Read

ಬ್ರ್ಯಾಂಡ್ ಕರ್ನಾಟಕ: ಮಹಿಳಾ ಉದ್ದಿಮೆಗಳಿಗೆ ಆದ್ಯತೆ; 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲ

05/03/2026 7:03 PM2 Mins Read

‘AI ಯುಗ’ ಎಂಬುದು ಕೇವಲ ಅಪ್‌ಗ್ರೇಡ್ ಅಲ್ಲ, ಇಡೀ ಆರ್ಥಿಕತೆಯ ಮರುಹೊಂದಿಕೆ: ಜಿಯೋ

05/03/2026 6:22 PM2 Mins Read
Recent News

ನಾಳೆ ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲೇ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ

05/03/2026 7:28 PM

BIGG NEWS : ಯುದ್ಧದ ಸಮಯದಲ್ಲಿ ಇರಾನ್ ಮಹತ್ವದ ಹೇಳಿಕೆ ; ತೈಲ ಆಮದಿನಲ್ಲಿ ಭಾರತಕ್ಕೆ ಬಿಗ್ ರಿಲೀಫ್.!

05/03/2026 7:22 PM

ಮೊರ್ಗನ್ ಸ್ಟಾನ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: ಜಾಗತಿಕವಾಗಿ 2,500 ಉದ್ಯೋಗ ಕಡಿತ- ವರದಿ | Morgan Stanley Layoffs

05/03/2026 7:17 PM

ಇರಾನ್-ಅಮೇರಿಕ ಯುದ್ಧದ ಎಫೆಕ್ಟ್ ಭಾರತಕ್ಕಿಲ್ಲ: ಗ್ಯಾಸ್, ತೈಲ ಪೂರೈಕೆಯಲ್ಲಿ ಕೊರತೆಯಿಲ್ಲ- ಸರ್ಕಾರದ ಸ್ಪಷ್ಟನೆ

05/03/2026 7:11 PM
State News
KARNATAKA

ನಾಳೆ ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲೇ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ

By kannadanewsnow0905/03/2026 7:28 PM KARNATAKA 1 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 6ರಂದು 2026-27 ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಈ ಬಜೆಟ್ ಮಂಡನೆಯ ನೇರಪ್ರಸಾರವನ್ನು…

ಬ್ರ್ಯಾಂಡ್ ಕರ್ನಾಟಕ: ಮಹಿಳಾ ಉದ್ದಿಮೆಗಳಿಗೆ ಆದ್ಯತೆ; 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲ

05/03/2026 7:03 PM

‘AI ಯುಗ’ ಎಂಬುದು ಕೇವಲ ಅಪ್‌ಗ್ರೇಡ್ ಅಲ್ಲ, ಇಡೀ ಆರ್ಥಿಕತೆಯ ಮರುಹೊಂದಿಕೆ: ಜಿಯೋ

05/03/2026 6:22 PM

ರಾಜ್ಯದ ’66 RTO ಕಚೇರಿ’ಗಳಲ್ಲಿ ‘mVahan’ ಮೊಬೈಲ್ ಆಪ್‌ ಜಾರಿ, ಭ್ರಷ್ಟಾಚಾರಕ್ಕೆ ಬ್ರೇಕ್!

05/03/2026 6:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.