ಕರಡ್ : ಮಹಾರಾಷ್ಟ್ರದ ಕರಡ್’ನಲ್ಲಿ ಸೋಮವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ನಾನು ಬದುಕಿರುವವರೆಗೂ ಸಂವಿಧಾನವನ್ನ ತಿದ್ದುಪಡಿ ಮಾಡುವ ಅಥವಾ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನ ಜಾರಿಗೆ ತರುವ ಯಾವುದೇ ಪ್ರಯತ್ನಗಳನ್ನ ತೀವ್ರವಾಗಿ ವಿರೋಧಿಸುತ್ತೇನೆ” ಎಂದು ಘೋಷಿಸಿದರು.
ನಾನು ಬದುಕಿರುವವರೆಗೂ ಸಂವಿಧಾನದ ಬದಲಾವಣೆ ಮತ್ತು ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಕರ್ನಾಟಕದಲ್ಲಿ ನಾವು ಕಾಂಗ್ರೆಸ್’ನ ಉದ್ದೇಶಗಳನ್ನು ನೋಡಿದ್ದೇವೆ. ಕರ್ನಾಟಕದಲ್ಲಿ ಒಬಿಸಿ 27% ಮೀಸಲಾತಿಯನ್ನ ಹೊಂದಿದೆ ಮತ್ತು ರಾತ್ರೋರಾತ್ರಿ ಕಾಂಗ್ರೆಸ್ ಎಲ್ಲಾ ಮುಸ್ಲಿಮರನ್ನು ಒಬಿಸಿ ಎಂದು ಘೋಷಿಸಿತು. ರಾತ್ರೋರಾತ್ರಿ ಒಬಿಸಿಗಳ ಹಕ್ಕುಗಳು ಮತ್ತು ಮೀಸಲಾತಿಗಳನ್ನ ಕಸಿದುಕೊಂಡು ಅವರಿಗೆ (ಮುಸ್ಲಿಮರಿಗೆ) ನೀಡಲಾಯಿತು. ಈಗ, ಸಂವಿಧಾನವನ್ನ ಬದಲಾಯಿಸುವ ಮೂಲಕ, ಕಾಂಗ್ರೆಸ್ ಅದೇ ಸೂತ್ರವನ್ನ ಇಡೀ ದೇಶದಲ್ಲಿ ಜಾರಿಗೆ ತರಲು ಬಯಸಿದೆ. ಮೋದಿ ಬದುಕಿರುವವರೆಗೆ ಮತ್ತು ನನ್ನೊಂದಿಗೆ ಜನರ ಆಶೀರ್ವಾದ ಇರುವವರೆಗೆ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಮತ್ತು ಸಂವಿಧಾನವನ್ನು ಬದಲಾಯಿಸುವ ನಿಮ್ಮ (ಕಾಂಗ್ರೆಸ್) ಪ್ರಯತ್ನ ಯಶಸ್ವಿಯಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು.
#WATCH | Maharashtra: During a public rally in Satara, Prime Minister Narendra Modi says, " In Karnataka, we saw the intentions of Congress…In Karnataka, OBC has a reservation of 27% and overnight Congress declared all Muslims as OBCs…overnight the rights and reservations of… pic.twitter.com/9bBqeeKh0k
— ANI (@ANI) April 29, 2024
ಮೂರನೇ ಹಂತದ ಚುನಾವಣೆ ಮೇ 7ರಂದು ನಡೆಯಲಿದೆ.
ಕೋವಿಡ್ ಗುಣಮುಖ ಸುಳ್ಳು ಹೇಳಿಕೆ ಮೂಲಕ ‘ಬಾಬಾ ರಾಮದೇವ್’ ರೆಡ್ ಲೈನ್ ದಾಟಿದ್ದಾರೆ : IMA ಅಧ್ಯಕ್ಷ
Shocking Video: ಮದುವೆ ಮೆಹಂದಿ ಶಾಸ್ತ್ರದ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಯುವತಿಗೆ ಹೃದಯಾಘಾತ: ಸ್ಥಳದಲ್ಲೇ ಸಾವು
BREAKING : ‘ಉತ್ತರಾಖಂಡ ಸರ್ಕಾರ’ದಿಂದ ‘ಪತಂಜಲಿ ಆಯುರ್ವೇದದ 15 ಉತ್ಪನ್ನ’ಗಳ ಲೈಸೆನ್ಸ್ ರದ್ದು