ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗೂ ಜೆಡಿಎಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಉಪ್ಪ ತಿಂದವರು ನೀರು ಕುಡಿಯಲಿ. ಪ್ರಜ್ವಲ್ ರೇವಣ್ಣ ಪರಾರಿಯಾಗಿದ್ರೆ ಎಸ್ಐಟಿ ಕರೆದುಕೊಂಡು ಬರುತ್ತೆ ಬಿಡಿ ಎಂಬುದಾಗಿ ಮಾಜಿ ಸಿಎಂ, ಜೆಡಿಎಸ್ ಪಕ್ಷದ ಮುಖಂಡ ಹಾಗೂ ಪ್ರಜ್ವಲ್ ಚಿಕ್ಕಪ್ಪ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ತನಿಖೆಯಿಂದ ಸತ್ಯಾಂಶಗಳು ಹೊರಬರುವವರೆಗೆ ಕಾಯಲು ಬಯಸುತ್ತೇನೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಅಗತ್ಯವಿದ್ದರೆ ಅವರನ್ನು ವಾಪಸ್ ಕರೆತರುವುದು ವಿಶೇಷ ತನಿಖಾ ತಂಡದ (ಎಸ್ಐಟಿ) ಜವಾಬ್ದಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
33 ವರ್ಷದ ಪ್ರಜ್ವಲ್ ರೇವಣ್ಣ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಹಿರಿಯ ಪುತ್ರ, ಶಾಸಕ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಕೆಲವು ಅಶ್ಲೀಲ ವೀಡಿಯೊ ತುಣುಕುಗಳು ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಹರಿದಾಡಲು ಪ್ರಾರಂಭಿಸಿವೆ.ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿದಿದ್ದಾರೆ.
‘ಸುಪ್ರೀಂ ಕೋರ್ಟ್’ ಉಗಿದಿದ್ದನ್ನೂ ಸಾಧನೆ ಎನ್ನುವಂತೆ ಹೇಳಿಕೊಳ್ಳೋದೇ ‘BJP ನಿರ್ಲಜ್ಜತನ’- ಕಾಂಗ್ರೆಸ್ ವಾಗ್ಧಾಳಿ
ಕಾಂಗ್ರೆಸ್ ರಾಜಕುಮಾರ ನಮ್ಮ ಮಹಾರಾಜರನ್ನ ಅವಮಾನಿಸ್ತಾರೆ, ನವಾಬರ ದೌರ್ಜನ್ಯ ಮರೆತು ಬಿಡ್ತಾರೆ : ಪ್ರಧಾನಿ ಮೋದಿ