ಕಡಬ: ಕಡಬದ ಆಲಂಕಾರು ಗ್ರಾಮದ ಬೂತ್ ನಂ.59ರಲ್ಲಿ ಮತ ಚಲಾಯಿಸಿದ ಫೋಟೋವನ್ನು ಸದಾನಂದ ಪೂಜಾರಿ ಎಂಬವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆತನ ವಿರುದ್ಧ ಜನಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮತದಾನದ ದಿನದಂದು ಪುತ್ತೂರಿನಲ್ಲಿಯೂ ಇದೇ ರೀತಿಯ ಘಟನೆಗಳು ವರದಿಯಾಗಿದ್ದು, ಪ್ರಕರಣಗಳು ದಾಖಲಾಗಲು ಕಾರಣವಾಗಿದೆ.
ಅಂತಹಾಗೇ ಮತಗಟ್ಟೆ ಒಳಗಡೆ ಮೊಬೈಲ್ ಪೋನ್ ಕೊಂಡೊಯ್ಯೋದಕ್ಕೆ ನಿಷೇಧ ಹೇರಲಾಗಿತ್ತು. ಮತಗಟ್ಟೆ ಅಧಿಕಾರಿ ಸೇರಿದಂತೆ ಯಾರಿಗೂ ಅವಕಾಶ ನೀಡಲಾಗಿರಲಿಲ್ಲ. ಇದರ ನಡುವೆ ಮತದಾನ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ದು, ಮತದಾನ ಮಾಡೋ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಕಾರಣ, ಈಗ ಸದಾನಂದ ಪೂಜಾರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
BREAKING: ‘ಲೈಂಗಿಕ ದೌರ್ಜನ್ಯ’ ಆರೋಪ: ‘ಸಂಸದ ಪ್ರಜ್ವಲ್ ರೇವಣ್ಣ’ ವಿರುದ್ಧ ‘FIR’ ದಾಖಲು
ಕಾಂಗ್ರೆಸ್ ರಾಜಕುಮಾರ ನಮ್ಮ ಮಹಾರಾಜರನ್ನ ಅವಮಾನಿಸ್ತಾರೆ, ನವಾಬರ ದೌರ್ಜನ್ಯ ಮರೆತು ಬಿಡ್ತಾರೆ : ಪ್ರಧಾನಿ ಮೋದಿ