ಬೆಂಗಳೂರು: ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಯುವತಿ ಸಜೀವ ದಹನವಾದಂತ ಪ್ರಕರಣದಲ್ಲಿ ಮೂವರು ಗಾಯಾಳು ಸಾವನ್ನಪ್ಪಿದ ಪರಿಣಾಮ, ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಮಾದಾವರ ಬಳಿಯಲ್ಲಿ ಏಪ್ರಿಲ್.22ರಂದು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿತ್ತು. ಅಲ್ಲದೇ ಅಪಘಾತದ ಬಳಿಕ ಬೆಂಕಿ ಕೂಡ ಕಾಣಿಸಿಕೊಂಡು ದಿವ್ಯಾ ಎಂಬ ಯುವತಿ ಸಜೀವದಹನಗೊಂಡಿದ್ದರು. ಇನ್ನುಳಿದಂತ 7 ಮಂದಿ ಗಾಯಗೊಂಡಿದ್ದರು.
ಸುಟ್ಟಗಾಯಗಳಿಂದ ಬಳಲುತ್ತಿದ್ದಂತ 7 ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹೀಗೆ ಚಿಕಿತ್ಸೆ ಪಡೆಯುತ್ತಿದ್ದಂತ ಮೂವರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಅಂದಹಾಗೇ ಮೃತರನ್ನು ಸುನೀತ್, ನಮನ್, ಮಯಾಂಕ್ ಎಂಬುದಾಗಿ ಗುರುತಿಸಲಾಗಿದೆ. ಇವರೆಲ್ಲರೂ ಗುಜರಾತ್ ಮೂಲದ ಕುಟುಂಬಸ್ಥರಾಗಿದ್ದಾರೆ.
ಅಂದಹಾಗೇ ಬೆಲೋನಾ ಕಾರಿಗೆ ಚಾಲಕ ರಕ್ಷಿತ್ ಗೂಗಲ್ ನಲ್ಲಿ ಸರ್ಚ್ ಮಾಡಿ ಫೇಕ್ ನಂಬರ್ ಹಾಕಿದ್ದನು. ಅದಕ್ಕೆ ಇನ್ಸೂರೆನ್ಸ್ ಕೂಡ ಕಟ್ಟಿರಲಿಲ್ಲ. ಈ ಕಾರು ಬೆಳಗಾವಿಯ ಪಲ್ಲವಿ ಎಂಬುವರಿಗೆ ಸೇರಿದ್ದು ಎಂಬುದಾಗಿ ತಿಳಿದು ಬಂದಿತ್ತು. ಈ ಬಗ್ಗೆ ನೆಲಮಂಗಲದ ಡಿವೈಎಸ್ಪಿ ಜಗದೀಶ್ ತನಿಖೆ ನಡೆಸುತ್ತಿದ್ದಾರೆ. ನಲೆಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಾವಣಗೆರೆಯಲ್ಲಿ ಬೀಗರ ಊಟ ಸೇವಿಸಿದ 96ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಕಾಂಗ್ರೆಸ್ ರಾಜಕುಮಾರ ನಮ್ಮ ಮಹಾರಾಜರನ್ನ ಅವಮಾನಿಸ್ತಾರೆ, ನವಾಬರ ದೌರ್ಜನ್ಯ ಮರೆತು ಬಿಡ್ತಾರೆ : ಪ್ರಧಾನಿ ಮೋದಿ