ಹಾವೇರಿ: ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ಮೊತ್ತಕ್ಕೆ ಸಮನಾಗಿ ರಾಜ್ಯ ಸರ್ಕಾರವೂ ತನ್ನ ಖಜಾನೆಯಿಂದ ಹಣ ಹಣ ಸೇರಿಸಿ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ ಯುಪಿಎ ಹಾಗೂ ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಬಿಡಿಗಡೆಯಾದ ಪರಿಹಾರದ ದಾಖಲೆ ಬಿಡುಗಡೆ ಮಾಡಿ ಮಾತಮಾಡಿದರು. ಬರ ಪರಿಹಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ಹಿಂದೆದು ಕಾಣದ ರಾಜಕಾಣರ ಮಾಡುತ್ತಿದೆ. ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಳಂಬ ಆಯಿತು ಎಂದು ಕಾಂಗ್ರೆಸ್ ನವರು ಹೇಳಿದ್ದಾರೆ. ಯುಪಿಎ ಅವಧಿಯಲ್ಲಿ ಒಂದು ವರ್ಷ, ಎಂಟು ತಿಂಗಳ ನಂತರ ಬರ ಪರಿಹಾರ ಕೊಟ್ಟಿದ್ದಾರೆ. ಆಗ ಎಂದೂ ಪ್ರತಿಭಟನೆ ಮಾಡದ ಕಾಂಗ್ರೆಸ್ ನವರು ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ. ಆನೆ ಹೊಟ್ಟಿಗೆ ಅರೆ ಕಾಸಿನ ಮಜ್ಜಿಗೆ ಅಂತ ಹೇಳಿದ್ದಾರೆ.ಆದರೆ, ಯುಪಿಎ ಅವಧಿಯಲ್ಲಿ ಹತ್ತು ವರ್ಷದಲ್ಲಿ 1954 ಕೋಟಿ ರೂ. ಪರಿಹಾರ ಕೊಟ್ಟಿದ್ದಾರೆ.
2004-05 ರಲ್ಲಿ ರಾಜ್ಯ ಸರ್ಕಾರ 1147 ಕೋಟಿ ರೂ. ಕೇಳಿತ್ತು, ಆಗ ಅವರು ಕೊಟ್ಠಿದ್ದು, 83 ಕೋಟಿ ಕೇವಲ ಶೇ 7% ನೀಡಿದೆ. 2006-07ರಲ್ಲಿ ರಾಜ್ಯ ಸರ್ಕಾರ 1262 ಕೇಳಿತ್ತು, ಕೇಂದ್ರ ಸರ್ಕಾರ ಕೊಟ್ಟಿದ್ದು 78 ಕೋಟಿ ರೂ. 2008-09 ರಲ್ಲಿ ರಾಜ್ಯ ಸರ್ಕಾರ 2043 ಕೋಟಿ ರೂ. ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಕೊಟ್ಟಿದ್ದು 83 ಕೋಟಿ ರೂ. ಮಾತ್ರ.2011-12 ರಲ್ಲಿ 6214 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ 760 ಕೋಟಿ ರೂ. ನೀಡಿತ್ತು. 2012-13 ರಲ್ಲಿ 7642 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗೊತ್ತು. ಆಗ ಕೇಂದ್ರದಿಂದ 526 ಕೋಟಿ ರೂ.ಬಿಡುಗಡೆಯಾಗಿತ್ತು. 2013-14 ರಲ್ಲಿ 877.ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿತ್ತು ಕೇಂದ್ರ ಸರ್ಕಾರ 308 ಮಾತ್ರ ಬಿಡುಗಡೆ ಮಾಡಿತ್ತು ಎಂದು ವಿವರಣೆ ನೀಡಿದರು.
ಇನ್ನು 2014 ರಿಂದ 24 ರ ವರೆಗೆ ಎನ್ ಡಿಎ ಅವಧಿಯಲ್ಲಿ 2014-15 ರಲ್ಲಿ ರಾಜ್ಯ ಸರ್ಕಾರ 930 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ 305 ಕೋಟಿ ರೂ. ಪರಿಹಾರ ನೀಡಿತ್ತು. 2015-16 ರಲ್ಲಿ 5247 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ 2263 ಕೋಟಿ ರೂ. ಬಿಡುಗಡೆ ಮಾಡಿತ್ತು. 2016-17 ರಲ್ಲಿ 7572 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ 2577 ಕೋಟಿ ರೂ. ಪರಿಹಾರ ನೀಡಿತ್ತು. 2018-19 ರಲ್ಲಿ ರಾಜ್ಯ ಸರ್ಕಾರ 4064 ಕೋಟಿ ರೂ. ಮನವಿ ಮಾಡಿತ್ತು ಕೇಂದ್ರ ಸರ್ಕಾರ 1040 ಕೋಟಿ ರೂ. ಬಿಡುಗಡೆ ಮಾಡಿತ್ತು.
ಯುಪಿಎ ಎನ್ ಡಿ ಎ ಪರಿಹಾರ ಅಜಗಜಾಂತರ
ಕೇಂದ್ರದಿಂದ ಬದಂದಿರುವ ಬರ ಪರಿಹಾರದಲ್ಲಿ ಯುಪಿಎ ಅವಧಿಯಲ್ಲಿ 2004-14 ರ ವರೆಗೆ ಹತ್ತು ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಬರ ಪರಿಹಾರಕ್ಕೆ 19,579 ಕೋಟಿ ರೂ.ಮನವಿ ಸಲ್ಲಿಸಲಾಗಿತ್ತು.ಅಂದಿನ ಯುಪಿಎ ಸರ್ಕಾರ ಹತ್ತು ವರ್ಷದಲ್ಲಿ ಬಿಡುಗಡೆ ಮಾಡಿರುವ ಹಣ ಕೇವಲ 1954 ಕೋಟಿ ರೂ. ಮಾತ್ರ, ಇದು ಒಟ್ಟು ಬೇಡಿಕೆ ಶೇ 10% ಮಾತ್ರ ಯುಪಿಎ ಅವಧಿಯಲ್ಲಿ ಪರಿಹಾರ ಬಂದಿತ್ತು.
ಎನ್ ಡಿಎ ಅವಧಿಯಲ್ಲಿ 2014-24 ವರೆಗೆ ರಾಜ್ಯ ಸರ್ಕಾರದಿಂದ 18,747 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ 6185 ಕೋಟಿ ರೂ. ಬಿಡುಗಡೆ ಮಾಡಿತ್ತು. ಅಂದರೆ, ಶೇ 30% ಪರಿಹಾರ ಬಿಡುಗಡೆ ಮಾಡಿತ್ತು. ಅಲ್ಲದೇ ನಿನ್ನೆ 3454 ಕೋಟಿ ರೂ. ಘೋಷಣೆ ಮಾಡಿದೆ. ಯುಪಿಎ ಅವಧಿಯಲ್ಲಿ ಈಗ ಕೊಟ್ಡಿರುವ ಹಣದ ಶೇ 30% ರಷ್ಟು ಮಾತ್ರ ಅವರು ಕೊಟ್ಟಿದ್ದಾರೆ. ಆಗ ಕಾಂಗ್ರೆಸ್ ನವರು ಯಾಕೆ ಪ್ರತಿಭಟನೆ ಮಾಡಲಿಲ್ಲ. ಈಗ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿದರೆ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನವರು ಇದ್ದಾರೆ ಎಂದು ಹೇಳಿದರು.
ದುಪ್ಪಟ್ಟು ಪರಿಹಾರ
ನಮ್ಮ ಕಾಲದಲ್ಲಿ ಹಾಗೂ ಯಡಿಯೂರಪ್ಪ ಅವರ ಅವಧಿಯಲ್ಲಿ ಪ್ರವಾಹ ಬಂದಾಗ ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾದವಾಗಿ 10 ಸಾವಿರ ಬಿಡುಗಡೆ ಮಾಡಿದ್ದೇವು. ಪೂರ್ಣ ಪ್ರಮಾಣದ ಮನೆ ಬಿದ್ದರೆ 5 ಲಕ್ಷ, ಭಾಗಶಹ ಬಿದ್ದರೆ 3 ಲಕ್ಷ, ಹಾಗೂ ಅಲ್ಪ ಪ್ರಮಾಣದ ಹಾನಿಗೆ 50 ಸಾವಿರ ರೂ. ಪರಿಹಾರ ನೀಡಿದ್ದೇವು. ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆಯಿಂದ ನಯಾಪೈಸೆ ಪರಿಹಾರ ನೀಡಿಲ್ಲ. ಹೀಗಾಗಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ನಾಟಕ ಹೂಡಿದ್ದಾರೆ, ನೀವು ರಾಜ್ಯ ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆ ಮಾಡಿದ್ದರೆ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡುವ ನೈತಿಕತೆ ಇರುತ್ತಿತ್ತು ಎಂದು ಹೇಳಿದರು.
ಪ್ರವಾಹ ಬಂದಾಗ ಬೆಳೆ ಪರಿಹಾರ ಎರಡು ಪಟ್ಡು ಕೊಟ್ಡಿದ್ದೇವೆ. ಪ್ರತಿ ಹೆಕ್ಟೇರ್ ಗೆ 6 ಸಾವಿರ ಇತ್ತು ನಾವು 13600 ಕೋಟಿ ರೂ. ಕೊಟ್ಟಿದ್ದೇವು, ನೀರಾವರಿ ಬೆಳೆ ಹಾನಿಗೆ 13000 ಕೋಟಿ ಇತ್ತು ನಾವು 25000 ಕೋಟಿ ರೂ. ಕೊಟ್ಟಿದ್ದೇವು. ತೋಟಗಾರಿಕೆ ಬೆಳೆಗಳಿಗೆ 18000 ಕೋಟಿ ಇತ್ತು. ನಾವು 28000 ಕೋಟಿ ರೂ. ಪರಿಹಾರ ನೀಡಿದ್ದೇವು ಎಂದು ಹೇಳಿದರು.
ಪ್ರಧಾನಿ ಮೋದಿ ಟೀಕಿಸುವುದು ಫ್ಯಾಷನ್
ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ರಾಜಕಾರಣದ ಫ್ಯಾಷನ್ ಆಗಿದೆ. ಕಾಂಗ್ರೆಸ್ ಗೆ ಮೋದಿ ಫೋಬಿಯಾ ಶುರುವಾಗಿದೆ ಮೋದಿ ಟೀಕಿಸಿದರೆ ತಮ್ಮ ಪ್ರಚಾರ ಹೆಚ್ಚಾಗುತ್ತದೆ ಎಂದು ಕೊಂಡಿದ್ದಾರೆ. ಆದರೆ, ಮಳದಿಯವರನ್ನು ಟೀಕಿಸಿದಷ್ಟು ಮೋದಿಯವರ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಹೇಳಿದರು.
ಇನ್ನು ಜನರ ಆಸ್ತಿ ಹಂಚಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್ ನವರು ಹೇಳಿದ್ದಾರೆ. ವಿರೊಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಸರ್ವೆ ಮಾಡುತ್ತೆವೆ ಅಂತ ಹೇಳುತ್ತಿದ್ದಾರೆ.
ಮೊದಲು ಕಾಂಗ್ರೆಸ್ ಪಕ್ಚದ ನಾಯಕರ ಬೇನಾಮಿ ಆಸ್ತಿ ಸರ್ವೆ ಆಗಬೇಕು. ನಮ್ಮ ಉಪ ಮುಖ್ಯಮಂತ್ರಿ ಗಳು ಬಹಳ ಹುಷಾರಿದ್ದಾರೆ. ಶಾಮ್ ಪಿತ್ರೊಡಾ ಹೇಳಿಕೆಗೂ ಪಕ್ಚಕ್ಕೂ ಸಂಬಂಧ ಇಲ ಅಂತ ಹೇಳಿದ್ದಾರೆ ಎಂದರು.
ಇನ್ನು ಉದ್ಯಮಿಗಳಾದ ಅದಾನಿ ಅಂಬಾನಿಯನ್ನು ಕಾಂಗ್ರೆಸ್ ನವರೇ ಬೆಳೆಸಿದ್ದಾರೆ.1980 ರ ದಶಕದಲ್ಲಿ ಯಾರು ಪ್ರಧಾನಿಯಾಗಿದ್ದರು. ಮನಮೋಹನ್ ಸಿಂಗ್ ಅವರು ಉದಾರಿಕರಣ, ಖಾಸಗೀಕರಣ ಮಾಡಿದರು. ಅದರ ಪರಿಣಾಮ ಖಾಸಗಿಯವರು ಶ್ರೀಮಂತರಾಗಿದ್ದಾರೆ. ಯಾವಾಗ ತಳ ಹಂತದ ಜನರಆದಾಯ ಹೆಚ್ಚಳವಾಗುತ್ತದೆ ಆಗ ದೇಶ ಶ್ರೀಮಂತ ವಾಗುತ್ತದೆ. ಮೋದಿಯವರ ಅವಧಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಕೊಟ್ಯಾದೀಶರಾಗಿದ್ದಾರೆ. 25 ಕೋಟಿ ಜನರ ಬಡತನ ನಿರ್ಮೂಲನೆ ಮಾಡಿ ಬಡವರ ನ್ನು ಶ್ರೀಮಂತರನ್ನಾಗಿ ಪ್ರಧಾನಿ ಮೋದಿ ಮಾಡಿದ್ದಾರೆ. ಶೇ 6.6 ಆರ್ಥಿಕ ಅಭಿವೃದ್ಧಿ ಆಗಿದೆ. ಬೇರೆ ಯಾವುದೇ ದೇಶ ಇಷ್ಟು ಅಭಿವೃದ್ಧಿ ಯಾಗುತ್ತಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿತು ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಕೊಡುವ ವರದಿಗೂ ಕೇಂದ್ರದ ವರದಿಗೂ ವ್ಯತ್ಯಾಸ ಆದಾಗ ಅದನ್ನು ಪರಿಶಿಲನೆ ಮಾಡಲು ಸಮಯ ತೆಗೆದುಕೊಳ್ಳಬೇಕು. ಆಡಳಿತ ಪಕ್ಷ ಸರಿಯಾಗಿ ವರದಿ ಕೊಟ್ಟಿಲ್ಲ ಎಂದರು.
ಸರಿಸಮ ಹಣ ಬಿಡುಗಡೆ ಮಾಡಲಿ
ಕೇಂದ್ರ ಸರ್ಕಾರ ಈಗ ಬಿಡುಗಡೆ ಮಾಡಿರುವ 5454 ಕೋಟಿ ರೂ. ಗೆ ಸರಿಯಾದ ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕು. ಆಗ ನನಗೆ ಖುಷಿಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ಬದ್ದತೆ ಇದ್ದರೆ, ಖಜಾನೆಯಲ್ಕಿ ಹಣ ಇದ್ದರೆ, ಜನರಿಗೆ ಕೊಡುವ ಮನಸಿದ್ದರೆ ರಾಜ್ಯ ಸರ್ಕಾರ. ತನ್ನ ಖಜಾನೆಯ ಹಣವನ್ನೂ ನೀಡಲಿ ಎಂದು ಆಗ್ರಹಿಸಿದರು.
ಹಾವೇರಿ ಕ್ಷೇತ್ರಕ್ಕೆ ನಡ್ಡಾ, ಅಮಿತ್ ಶಾ ಆಗಮನ
ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಏ 30 ರಂದು ಜೆಪಿ ನಡ್ಡಾ ಆಗಮಿಸಲಿದ್ದು, ಅಂದು ಕಾಗಿನೆಲೆಗೆ ಬಂದು ದೇವರ ದರ್ಶನ ಪಡೆದು, ಪ್ರಮುಖರ ಭೇಟಿ ಮಾಡಿ, ನಂತರ ಮೊಟೆಬೆನ್ನೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಕೆಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 1ಕ್ಕೆ ರಾಣೆಬೆನ್ನೂರಿಗೆ ಬರುತ್ತಾರೆ. ರೋಡ್ ಶೋ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಇನ್ನು ರಾಜ್ಯದ ಸ್ಟಾರ್ ಪ್ರಚಾರಕರಾದ ಸಂಸದ ಪ್ರತಾಪ್ ಸಿಂಹ ಸೋಮವಾರ ಬಂದು ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ, ಗದಗ ಬೆಟಗೇರಿಯಲ್ಲಿ ರೋಡ್ ಶೋ ಮಾಡುತ್ತಾರೆ. ನಟಿ ತಾರಾ ಅನುರಾಧ ಅವರೂ ಸೋಮವಾರ ಆಗಮಿಸಿ ಗದಗ ಬೆಟಗೇರಿ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ರಾಜಕುಮಾರ ನಮ್ಮ ಮಹಾರಾಜರನ್ನ ಅವಮಾನಿಸ್ತಾರೆ, ನವಾಬರ ದೌರ್ಜನ್ಯ ಮರೆತು ಬಿಡ್ತಾರೆ : ಪ್ರಧಾನಿ ಮೋದಿ