ಬೆಂಗಳೂರು: ಹಾಸನ ಪೆನ್ ಡ್ರೈವ್ ವಿಚಾರವಾಗಿ ಮೋದಿಯವರೇ ನಿಮ್ಮ ಮಿತ್ರ ಪಕ್ಷದ ಪ್ರಜ್ವಲ್ ರೇವಣ್ಣ ಕೃತ್ಯದ ಬಗ್ಗೆ ಮಾತನಾಡಿ ಎಂಬುದಾಗಿ ಕಾಂಗ್ರೆಸ್ ಪಕ್ಷದ ಕವಿತಾರೆಡ್ಡಿ ಆಗ್ರಹಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದಂತ ಅವರು, ಮಾಜಿ ಪ್ರಧಾನಿ ಕುಟುಂಬದ ಸದಸ್ಯ ಪ್ರಜ್ವಲ್ ರೇವಣ್ಣ ಮಾಡಿರುವ ಈ ಹೀನ ಕೃತ್ಯ ಖಂಡನಿಯ. ಈ ಕುಟುಂಬದ ಸದಸ್ಯರು ಎಲ್ಲಾ ಅಧಿಕಾರಗಳನ್ನು ಅನುಭವಿಸಿರುವವರು. ಎಲ್ಲಾ ಹುದ್ದೆಗಳ ರುಚಿ ಕಂಡಿದ್ದಾರೆ. ಇಂತಹ ಕುಟುಂಬದ ಸದಸ್ಯ ಯಾವುದೇ ಕಾನೂನಿನ ಭಯ ಇಲ್ಲದೆ ಜರ್ಮನಿಗೆ ಹಾರಿ ಹೋಗಿದ್ದಾರೆ. ಇವರಿಂದ ಶೋಷಣೆಗೆ ಒಳಗಾದ ಮಹಿಳೆಯರನ್ನು ಹೇಗೆ ರಕ್ಷಣೆ ಮಾಡುವುದು ಎನ್ನುವುದೇ ಚಿಂತೆಯಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಸಣ್ಣ ವಿಚಾರಕ್ಕೂ ಮಾತನಾಡುವ ಪ್ರಧಾನಿ ಮೋದಿ ಅವರೇ ನಿಮ್ಮ ಮಿತ್ರ ಪಕ್ಷದ ಲೋಕಸಭಾ ಅಭ್ಯರ್ಥಿಯ ಕೃತ್ಯದ ಬಗ್ಗೆ ಮಾತನಾಡಿ. ಎರಡು ದಿನ ರಾಜ್ಯಕ್ಕೆ ಬರುತ್ತಿರುವ ಮೋದಿ ಅವರನ್ನು ಮಾಧ್ಯಮಗಳು ಪ್ರಶ್ನೆ ಮಾಡಬೇಕು. ಏನೇ ಆದರೂ ಓಡಿ ಬರುವ ಶೋಭಾಕ್ಕ ಎಲ್ಲಿ ನಿಮ್ಮ ದನಿ ಅಡಗಿ ಹೋಗಿದೆಯೇ? ಸಿ. ಟಿ. ರವಿ ಅವರೇ, ನಾಲಾಯಕ್ ಸಿಎಂ ಎಂದು ನಾಲಿಗೆ ಹರಿಬಿಟ್ಟ ವಿಜಯೇಂದ್ರ ಅವರೇ ಈಗ ನಿಮ್ಮ ನಾಲಿಗೆ ಹೊರಳುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸ್ವಯಂ ಘೋಷಿತ ವಿರೋಧ ಪಕ್ಷದ ನಾಯಕ ಯತ್ನಾಳ್ ಅವರೇ, ಆರ್. ಅಶೋಕ ಅವರೇ ಎಲ್ಲಿದ್ದೀರಿ. ಇದು ರಾಜಕೀಯ ವಿಚಾರವಲ್ಲ ದೇಶದ ಮರ್ಯಾದೆಯ ವಿಚಾರ. ನಮ್ಮ ಹೆಣ್ಣುಮಕ್ಕಳ ವಿಚಾರ. ಮಹಿಳೆಯ ಪರವಾಗಿ ದನಿ ಎತ್ತಲು ನಿಮಗೆ ಏನಾಗಿದೆ. ಪ್ರತಿಯೊಂದಕ್ಕೂ ಠಕ್ಕರ್ ಕೊಡುವ ಕುಮಾರಣ್ಣ ಸಾವಿರಾರು ಹೆಣ್ಣುಮಕ್ಕಳ ಮಾನ ಹಾನಿಯಾಗಿದೆ. ತಾಯಿ, ಸೊಸೆ, ಮಗಳು ಸೇರಿದಂತೆ ಅನೇಕರು ಪ್ರಜ್ವಲ್ ರೇವಣ್ಣ ಅವರ ಕೃತ್ಯಕ್ಕೆ ಬಲಿಯಾಗಿದ್ದಾರೆ. ಇವರ ಪರವಾಗಿ ಮಾತನಾಡಲು ಏನಾಗಿದೆ ನಿಮಗೆ? ಎಂದು ಕೇಳಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಅವರ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಎಸ್ ಐ ಟಿ ರಚನೆ ಮಾಡಿದ್ದಾರೆ. ನಾವು ಇದನ್ನು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಚುನಾವಣಾ ಪ್ರಚಾರ ಗೀತೆಯನ್ನು ಮಾರ್ಪಡಿಸುವಂತೆ AAPಗೆ ಚುನಾವಣಾ ಆಯೋಗ ಆದೇಶ