ಬೆಂಗಳೂರು: ರಾಜ್ಯದಲ್ಲಿ ನಿನ್ನೆ ನಡೆದಂತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಶೇ.69ರಷ್ಟು ಮತದಾನ ನಡೆದಿದೆ. ಅಲ್ಲದೇ ಬಹುತೇಕ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ.
ಚಾಮರಾಜನಗರ ತಾಲೂಕಿನ ಮಹದೇಶ್ವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಮತಯಂತ್ರಕ್ಕೆ ಬೆಂಕಿ ಹಚ್ಚಿ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದಂತೆ ಘಟನೆ ನಡೆದಿದೆ. ಅಲ್ಲದೇ ಬೆಂಗಳೂರಿನ ಮಂಜುನಾಥ ನಗರ ಕಾಂಗ್ರೆಸ್ ಕಾರ್ಯಕರ್ತರಿಂದ ಚೊಂಬು ಖಾಲಿ ಸಿಲಿಂಡರ್ ಪ್ರದರ್ಶನ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ನಲ್ಲಿ ತಾಂತ್ರಿಕ ದೋಷ ಸೇರಿದಂತೆ ಸಣ್ಣಪುಟ್ಟ ಘಟನೆ ಹೊರತುಪಡಿಸಿ, ರಾಜ್ಯಾಧ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ.
ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಶೇ.69.23ರಷ್ಟು ಮತದಾನವಾಗಿದೆ. ಮತದಾನಕ್ಕೆ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 30,602 ಮತಗಟ್ಟೆ ಸ್ಥಾಪಿಸಲಾಗಿತ್ತು.
ನೆಬ್ರಾಸ್ಕಾ ನಗರದಲ್ಲಿ ಭೀಕರ ಸುಂಟರಗಾಳಿಯಿಂದಾಗಿ ಒಮಾಹಾ ವಿಮಾನ ನಿಲ್ದಾಣ ಬಂದ್