ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡಿದ್ದಂತ ಮತದಾನವು ಸಂಜೆ 6 ಗಂಟೆಯವರೆಗೆ ಯಶಸ್ವಿಯಾಗಿ ನಡೆದು ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಆದ್ರೇ ಮತದಾನ ಕೇಂದ್ರದ ಒಳಗಡೆ ಇರುವವರಿಗೆ ಎಲ್ಲಾ ಮತದಾರರು ಮುಗಿಯೋವರೆಗೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ.
ಇಂದು ನಡೆದಂತ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನದಲ್ಲಿ ಮಂಡ್ಯದಲ್ಲಿ ಅತೀಹೆಚ್ಚು ಮತದಾನವಾಗಿದ್ದರೇ, ಬೆಂಗಳೂರಲ್ಲಿ ಅತೀ ಕಡಿಮೆ ಮತದಾನವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಬಹುತೇಕ ಶಾಂತಿಯುತವಾಗಿ ಎಲ್ಲಾ ಕಡೆಯಲ್ಲಿ ಮತದಾನ ನಡೆದಿದೆ.
ಸಂಜೆ 5 ಗಂಟೆಯವರೆಗೆ ಕೇಂದ್ರ ಚುನಾವಣಾ ಆಯೋಗ ನೀಡಿದಂತ ಮಾಹಿತಿಯ ಅನುಸಾರವಾಗಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.63.90ರಷ್ಟು ಮಾತ್ರ ಮತದಾನವಾಗಿದೆ.
ಇಲ್ಲಿದೆ 14 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ
- ಉಡುಪಿ-ಚಿಕ್ಕಮಗಳೂರು – ಶೇ.72.13
- ಹಾಸನ- ಶೇ.72.13
- ದಕ್ಷಿಣ ಕನ್ನಡ- ಶೇ.71.83
- ಚಿತ್ರದುರ್ಗ- ಶೇ.67
- ತುಮಕೂರು – ಶೇ.72.10
- ಮಂಡ್ಯ- ಶೇ.74.87
- ಮೈಸೂರು- ಶೇ.65.85
- ಚಾಮರಾಜನಗರ- ಶೇ.69.60
- ಬೆಂಗಳೂರು ಗ್ರಾಮಾಂತರ – ಶೇ.61.78
- ಬೆಂಗಳೂರು ಉತ್ತರ- ಶೇ.50.84
- ಬೆಂಗಳೂರು ಕೇಂದ್ರ – ಶೇ.48.61
- ಬೆಂಗಳೂರು ದಕ್ಷಿಣ- ಶೇ.49.37
- ಚಿಕ್ಕಬಳ್ಳಾಪುರ – ಶೇ.70.97
- ಕೋಲಾರ- ಶೇ.71.26
‘SC, ST, OBC’ ಹಕ್ಕುಗಳನ್ನ ಕಸಿದುಕೊಳ್ಳಲು ಕಾಂಗ್ರೆಸ್ ಪಿತೂರಿ : ಪ್ರಧಾನಿ ಮೋದಿ