ನವದೆಹಲಿ: ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಪ್ಯಾಲೆಸ್ಟೈನ್ ಬೆಂಬಲಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲ್ಪಟ್ಟ ಇಬ್ಬರು ವಿದ್ಯಾರ್ಥಿಗಳಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಭಾರತೀಯ ಮೂಲದ ವಿದ್ಯಾರ್ಥಿ ಅಚಿಂತ್ಯ ಶಿವಲಿಂಗನ್ ಕೂಡ ಒಬ್ಬರು ಎನ್ನಲಾಗಿದೆ.
ಪ್ರಿನ್ಸ್ಟನ್ ಅಲುಮ್ನಿ ವೀಕ್ ಪ್ರಕಾರ, ಗುರುವಾರ ಮುಂಜಾನೆ ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಅಂಗಳದಲ್ಲಿ ಡೇರೆಗಳನ್ನು ನಿರ್ಮಿಸಿದ ನಂತರ ತಮಿಳುನಾಡು ಮೂಲದ ಶಿವಲಿಂಗನ್ ಮತ್ತು ಹಸನ್ ಸಯೀದ್ ಅವರನ್ನು ಬಂಧಿಸಲಾಗಿದೆ