ನವದೆಹಲಿ: 18 ನೇ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂಧು (ಏಪ್ರಿಲ್ 26) ನಡೆಯಲಿದ್ದು, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಕ್ಷೇತ್ರಗಳ ಮತದಾರರು ಪ್ರಜಾಪ್ರಭುತ್ವದ ಅತಿದೊಡ್ಡ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕದ 28 ಸ್ಥಾನಗಳ ಪೈಕಿ 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, 2019 ರ ಚುನಾವಣೆಯಲ್ಲಿನ ಸಾಧನೆಯನ್ನು ಪುನರಾವರ್ತಿಸುವ ಗುರಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊಂದಿದೆ.
ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 247 ಅಭ್ಯರ್ಥಿಗಳು ಕಣದಲ್ಲಿದ್ದರೆ, ಮಹಾರಾಷ್ಟ್ರದ 8 ಸ್ಥಾನಗಳಲ್ಲಿ 204 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಸಿ.ಎನ್.ಮಂಜುನಾಥ್, ಗೋವಿಂದ ಕಾರಜೋಳ ಕಣದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಡಿ.ಕೆ.ಸುರೇಶ್, ರಾಜೀವ್ ಗೌಡ, ಸೌಮ್ಯಾ ರೆಡ್ಡಿ, ಬಿ.ಎನ್.ಚಂದ್ರಪ್ಪ, ಕೆ.ಜಯಪ್ರಕಾಶ್ ಹೆಗ್ಡೆ, ಜೆಡಿಎಸ್ ನಿಂದ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಕಣದಲ್ಲಿದ್ದಾರೆ. ಮಂಡ್ಯ, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.
ಕರ್ನಾಟಕ ಲೋಕಸಭಾ ಚುನಾವಣೆಯ 2ನೇ ಹಂತದ ಅಭ್ಯರ್ಥಿಗಳು
ಮಂಡ್ಯ: ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್), ವೆಂಕಟರಮಣೇಗೌಡ (ಕಾಂಗ್ರೆಸ್)
ಕೋಲಾರ: ಕೆ.ವಿ.ಗೌತಮ್ (ಕಾಂಗ್ರೆಸ್) ವಿರುದ್ಧ ಎಂ.ಮಲ್ಲೇಶ್ ಬಾಬು (ಜೆಡಿಎಸ್)
ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) ವಿರುದ್ಧ ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)
ಹಾಸನ: ಪ್ರಜ್ವಲ್ ರೇವಣ್ಣ (ಜೆಡಿಎಸ್) ಮತ್ತು ಶ್ರೇಯಸ್ ಎಂ ಪಟೇಲ್ (ಕಾಂಗ್ರೆಸ್)
ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಬಿಜೆಪಿ) ವಿರುದ್ಧ ಎಂ.ಲಕ್ಷ್ಮಣ್ (ಕಾಂಗ್ರೆಸ್)
ತುಮಕೂರು: ವಿ.ಸೋಮಣ್ಣ (ಬಿಜೆಪಿ) ವಿರುದ್ಧ ಎಸ್.ಪಿ.ಮುದ್ದಹನುಮೇಗೌಡ (ಕಾಂಗ್ರೆಸ್)
ಚಿತ್ರದುರ್ಗ: ಗೋವಿಂದ ಕಾರಜೋಳ (ಬಿಜೆಪಿ) ವಿರುದ್ಧ ಬಿ.ಎನ್.ಚಂದ್ರಪ್ಪ (ಕಾಂಗ್ರೆಸ್)
ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ (ಬಿಜೆಪಿ) ವಿರುದ್ಧ ಎಂ.ಎಸ್.ರಕ್ಷಾ ರಾಮಯ್ಯ (ಕಾಂಗ್ರೆಸ್)
ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ), ಡಿ.ಕೆ.ಸುರೇಶ್ (ಕಾಂಗ್ರೆಸ್)
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ (ಬಿಜೆಪಿ) ವಿರುದ್ಧ ಸೌಮ್ಯಾ ರೆಡ್ಡಿ (ಕಾಂಗ್ರೆಸ್)
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ (ಬಿಜೆಪಿ), ಎಂ.ವಿ.ರಾಜೀವ್ ಗೌಡ (ಕಾಂಗ್ರೆಸ್)
ಬೆಂಗಳೂರು ಕೇಂದ್ರ: ಪಿ.ಸಿ.ಮೋಹನ್ (ಬಿಜೆಪಿ) ವಿರುದ್ಧ ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್)
ದಕ್ಷಿಣ ಕನ್ನಡ: ಕ್ಯಾಪ್ಟನ್ ಬ್ರಿಜೇಶ್ ಚೌಟ (ಬಿಜೆಪಿ) ವಿರುದ್ಧ ಪದ್ಮರಾಜ್ ಆರ್ ಪೂಜಾರಿ (ಕಾಂಗ್ರೆಸ್)
ಚಾಮರಾಜನಗರ: ಎಸ್.ಬಾಲರಾಜ್ (ಬಿಜೆಪಿ) ಮತ್ತು ಸುನೀಲ್ ಬೋಸ್ (ಕಾಂಗ್ರೆಸ್)