ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಏಪ್ರಿಲ್ 14ರಂದು ಗುಂಡು ಹಾರಿಸಿದ ಶೂಟರ್’ಗಳಿಗೆ ಬಂದೂಕು ಒದಗಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಮುಂಬೈ ಅಪರಾಧ ವಿಭಾಗವು ಸೋನು ಸುಭಾಷ್ ಚಂದರ್ ಮತ್ತು ಅನುಜ್ ಥಾಪನ್ ಎನ್ನುವವರನ್ನ ಪಂಜಾಬ್ನಿಂದ ಬಂಧಿಸಿದೆ. ಇವರಿಬ್ಬರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಆರೋಪಿಗಳಿಗೆ ಪಿಸ್ತೂಲ್ಗಳನ್ನು ಸರಬರಾಜು ಮಾಡಿದ್ದರು ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಮುಂಬೈ ಮನೆಯಲ್ಲಿ ಗುಂಡು ಹಾರಿಸಲು ಬಳಸಿದ ಬಂದೂಕನ್ನು ಭಾನುವಾರ ಬೆಳಿಗ್ಗೆ ಘಟನೆ ನಡೆಯುವ ಕೆಲವೇ ಗಂಟೆಗಳ ಮೊದಲು ಶೂಟರ್ಗಳಿಗೆ ಸರಬರಾಜು ಮಾಡಲಾಗಿದೆ.
ಮೂಲಗಳ ಪ್ರಕಾರ, ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಏಪ್ರಿಲ್ 13 ರ ರಾತ್ರಿ (ಶನಿವಾರ) ರಾತ್ರಿ ಬಂದೂಕನ್ನು ಶೂಟರ್ಗಳಿಗೆ ಹಸ್ತಾಂತರಿಸಲಾಗಿದೆ.
‘ಪ್ರಧಾನಿ ಮೋದಿ’ಗೆ ಕಾಂಗ್ರೆಸ್ ನಾಯಕ ‘ಮಲ್ಲಿಕಾರ್ಜುನ ಖರ್ಗೆ’ ಬಹಿರಂಗ ಪತ್ರ
ಶೀಘ್ರದಲ್ಲೇ ನಿಮ್ಮ ಸ್ವಂತ ಮನೆ ಕಟ್ಟುವ ಕನಸು ನನಸಾಗಲು ಪ್ರತಿದಿನ 9 ಬಾರಿ ಈ ಮಂತ್ರ ಜಪಿಸಿ
ಭಾರತದ ಉತ್ಪಾದಕತೆ ಶೇ.6ರಷ್ಟು ಮುಂದುವರಿದ್ರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಲಾಭವಾಗಲಿದೆ : ವರದಿ