ತುಮಕೂರು: ನಗರದಲ್ಲಿನ ಪ್ರಸಿದ್ಧ ಬಿರಿಯಾನಿ ಹೌಸ್ ನಲ್ಲಿ ಗ್ಯಾಸ್ ಪೈಕ್ ಸೋರಿಕೆಯಾಗಿದ್ದರಿಂದ ಹೋಟೆಲ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಮೂಲಕ ಅಪಾರ ಪ್ರಮಾಣದ ಬಿರಿಯಾನಿ ಹೌಸ್ ನಲ್ಲಿದ್ದಂತ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದಾವೆ.
ತುಮಕೂರು ನಗರದ ಹೊಸ ಬಡಾವಣೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ ಪ್ರಸಿದ್ಧ ಬಿರಿಯಾನಿ ಹೌಸ್ ನಲ್ಲಿ ಗ್ಯಾಸ್ ಪೈಪ್ ಸೋರಿಕೆಯಿಂದ ಅಗ್ನಿ ಅವಘಡ ಉಂಟಾಗಿದೆ.
ಬೆಂಕಿಯ ಕೆನ್ನಾಲಿಗೆಯಿಂದ ಬಿರಿಯಾನಿ ಹೌಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ನೆಲ ಮಹಡಿ ಹಾಗೂ ಮೇಲಿನ ಮಹಡಿಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿದ್ದಾವೆ.
ಗ್ಯಾಸ್ ಸೋರಿಕೆ ವೇಳೆ ಬಂದ್ ಮಾಡಲು ವಾಲ್ ಇಲ್ಲದೇ ಇರೋದೇ ಇಷ್ಟೊಂದು ದೊಡ್ಡ ಅಗ್ನಿ ಅವಘಡಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮತದಾರರೇ, ಮತಗಟ್ಟೆ ಅಧಿಕಾರಿ’ಗಳೇ ಗಮನಿಸಿ: ನಾಳೆ ‘ಮತದಾನ ಕೇಂದ್ರ’ದಲ್ಲಿ ‘ಮೊಬೈಲ್ ಬಳಕೆ’ಗೆ ಅವಕಾಶವಿಲ್ಲ
BREAKING : ದೆಹಲಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ಅಬಕಾರಿ ನೀತಿ ಹಗರಣದ ‘ಕಿಂಗ್ ಪಿನ್’ : ED