ಬೆಂಗಳೂರು: 2024ರ ಲೋಕಸಭಾ ಚುನಾವಣೆಯ ಕರ್ತವ್ಯಗಳಿಗೆ ನಿಯೋಜಿಸಲಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಚುನಾವಣಾ ಭತ್ಯೆಯನ್ನು ಪಾವತಿಸುವಂತೆ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಈ ಕುರಿತಂತೆ ಸಹಾಯಕ ಆರಕ್ಷಕ ಮಹಾ ನಿರೀಕ್ಷಕರು ಅವರು ಆದೇಶ ಮಾಡಿದ್ದು, 2024ರ ಲೋಕಸಭಾ ಚುನಾವಣೆಗೆ ನೇಮಿಸಲ್ಪಟ್ಟ ವಿವಿಧ ಹುದ್ದೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಚುನಾವಣಾ ಭತ್ಯೆಯನ್ನು ಪಾವತಿಸಲು ಉಲ್ಲೇಖ(3)ರ ಸರ್ಕಾರದ ಸುತ್ತೋಲೆಯಂತೆ ಎ.ಸಿ ಬಿಲ್ಲಿನ ಮೇಲೆ ಚುನಾವಣ ಸಂಬಂಧಿತ ವೆಚ್ಚಗಳಿಗೆ ಸೆಳೆದು ಪಾವತಿಸಲು ಯಾವುದೇ ಮಿತಿಯಿಲ್ಲದಿರುವುದರಿಂದ ಸದರಿ ಸುತ್ತೋಲೆಯನ್ವಯ ಕೂಡಲೇ ಕ್ರಮವನ್ನು ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
2024ರ ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ನೇಮಿಸಲ್ಪಟ್ಟ ವಿವಿಧ ಹುದ್ದೆಯ ಅಧಿಕಾರಿ/ಸಿಬ್ಬಂದಿಯವರುಗಳಿಗೆ ಈ ಕೆಳಕಂಡಂತೆ ಸಂಭಾವನೆ/ಚುನಾವಣಾ ಭತ್ಯೆಯನ್ನು ನೀಡಲು ಕ್ರಮವನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.
1 Deputy Superintendent of Police and above (All Units/wings of police Department) (lump sum) – ರೂ.7000
2 Police Inspectors (All Units/wings of police Department) Per day or part there of- ರೂ.700
3 Police Sub Inspectors (per day or part there of)- ರೂ.500
4 ASI, HCs & PCs (All units/wings of Department) per day or part there of)- ರೂ.500
5.Packed lunch and or light refreshment for all Police Officers and men including Home Gaurds/Forest Gaurds/Gram Rakshak Dal/NCC (Senior) Caders/ Ex-Army/CPF (per head per day)- ರೂ.250.00.
BREAKING: ‘ಹೆಚ್.ಡಿ ಕುಮಾರಸ್ವಾಮಿ, ಬಿ.ವೈ ವಿಜಯೇಂದ್ರ’ ವಿರುದ್ಧ ‘ಚುನಾವಣಾ ಆಯೋಗ’ಕ್ಕೆ ‘ಕಾಂಗ್ರೆಸ್ ದೂರು’
ಏ.29 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ -2 : ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ