ಬೆಂಗಳೂರು: ಫ್ರಿ ಬಸ್ ಕೊಟ್ರು ಅಂತ ಹೆಣ್ ಮಕ್ಕಳು ಎಲ್ಲೆಲೋ ಹೋಗ್ತಾವ್ರೆ ಎನ್ನುವುದರ ಮೂಲಕ ಬಿಜೆಪಿ ನಾಯಕಿ, ಚಿತ್ರನಟಿ ಶೃತಿ ಅವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಅವರು ಹಲವು ಕಡೆಗಳಲ್ಲಿ ಗಂಡದರು ಮನೆಯಲ್ಲಿ ಅಳುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಹಸಿವಿನಿಂದ ಇದ್ದಾರೆ. ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹೆಣ್ಣುಮಕ್ಕಳು ಜುಟ್ಟುಹಿಡಿದುಕೊಂಡು ಹೊಡೆದುಕೊಳ್ಳುತ್ತಿದ್ದಾರೆ ಅಂತ ಆರೋಪಿಸಿದರು.ಇನ್ನೂ ಹಲವು ಮಂದಿ ಶೃತಿ ಅವರ ಹೇಳಿಕೆ ನೋಡಿ ಅವರ ವೈಯುಕ್ತಿಕ ಜೀವನದ ಬಗ್ಗೆ ಕೂಡ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದು ತಪ್ಪು ಅಂತ ಕೂಡ ಹಲವು ಮಂದಿ ಬುದ್ದಿ ಹೇಳುತ್ತಿದ್ದಾರೆ.