ರಾಯಚೂರು: ಜಿಲ್ಲೆಯಲ್ಲಿ ಇಂದು ಕಾರಿ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುಂತ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಹೊರವಲಯದಲ್ಲಿ ಕಾರೊಂದರ ಮುಂಭಾಗದ ಟೈಯರ್ ಸ್ಪೋಟಗೊಂಡಿದೆ. ಈ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದಂತ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಜಾಲಹಳ್ಳಿಯ ನಿವಾಸಿಗಳಾದಂತ ಗುತ್ತೆಪ್ಪ(45), ಜಗದೀಶ್ (50) ಎಂಬುವಂತವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಾಂಗ್ರೆಸ್’ ಅಧಿಕಾರಕ್ಕೆ ಬಂದರೆ ‘ರೈತರ ಸಾಲ’ವನ್ನು ಸಂಪೂರ್ಣವಾಗಿ ಮನ್ನಾ- ಸಿಎಂ ಸಿದ್ದರಾಮಯ್ಯ
BIG NEWS: ಇಂದಿನಿಂದ ಏ.26ರ ಮಧ್ಯರಾತ್ರಿವರೆಗೆ ಬೆಂಗಳೂರಲ್ಲಿ ‘144 ಸೆಕ್ಷನ್’ ಜಾರಿ: ‘ಮದ್ಯ ಮಾರಾಟ’ಕ್ಕೂ ನಿಷೇಧ