ನವದೆಹಲಿ : ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ನರಸಿಂಗ್ ಪಂಚಮ್ ಯಾದವ್ ಅವರನ್ನು ಭಾರತೀಯ ಕುಸ್ತಿ ಫೆಡರೇಶನ್ (WFI) ಅಥ್ಲೀಟ್ಗಳ ಆಯೋಗದ ಅಧ್ಯಕ್ಷರಾಗಿ ಬುಧವಾರ ಆಯ್ಕೆ ಮಾಡಲಾಗಿದೆ. ಆಯೋಗದ ಏಳು ಸ್ಥಾನಗಳಿಗೆ ಒಟ್ಟು ಎಂಟು ಸ್ಪರ್ಧಿಗಳು ಸ್ಪರ್ಧೆಯಲ್ಲಿದ್ದರು ಮತ್ತು ಏಳು ಸದಸ್ಯರು ಮತದಾನದ ನಂತರ ಆಯ್ಕೆಯಾದರು. ನಂತರ ಅವರು ನರಸಿಂಗ್ ಅವರನ್ನ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು.
2016ರ ಒಲಿಂಪಿಕ್ಸ್’ಗೂ ಮುನ್ನ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವ್ರು ಗಾಯದಿಂದಾಗಿ ಅರ್ಹತಾ ಪಂದ್ಯಾವಳಿಯಿಂದ ಹೊರಗುಳಿದಿದ್ದರೂ ನರಸಿಂಗ್ ವಿರುದ್ಧ ಟ್ರಯಲ್ ಪಂದ್ಯವನ್ನ ಕೋರಿದ್ದರು.
ಸುಶೀಲ್ ಕುಮಾರ್ ದೆಹಲಿ ಹೈಕೋರ್ಟ್ ಸಂಪರ್ಕಿಸಿದರು ಮತ್ತು ಅವರ ಮನವಿಯನ್ನ ತಿರಸ್ಕರಿಸಿದ ನಂತರ, ನರಸಿಂಗ್ ರಿಯೋ ಒಲಿಂಪಿಕ್ಸ್ಗೆ ಹೋಗುವುದು ಖಚಿತವಾಯಿತು. ಆದರೆ ಆಶ್ಚರ್ಯಕರವಾಗಿ, ನರಸಿಂಗ್ ಒಲಿಂಪಿಕ್ಸ್ಗೆ ಮೊದಲು ನಡೆಸಿದ ಎರಡು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು, ಈ ಕಾರಣದಿಂದಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಅವರನ್ನು ನಾಲ್ಕು ವರ್ಷಗಳ ಕಾಲ ನಿಷೇಧಿಸಿತು.
ವಿದ್ಯಾರ್ಥಿಗಳೇ ಎಚ್ಚರ ; ‘ನಕಲಿ ಆನ್ಲೈನ್ ಕಾರ್ಯಕ್ರಮ’ಗಳ ವಿರುದ್ಧ ‘UGC’ ವಾರ್ನಿಂಗ್
‘ನೇಹಾ ಹಿರೇಮಠ್’ ನಮ್ಮ ಮಗಳು, ನಮ್ಮ ಕರ್ನಾಟಕದ ಮಗಳು- ರಂದೀಪ್ ಸುರ್ಜೇವಾಲ
BREAKING : ಯುಕೆ : ವೆಸ್ಟ್ ವೇಲ್ಸ್ ಶಾಲೆಯಲ್ಲಿ ಚೂರಿ ಇರಿತ : ಮೂವರಿಗೆ ಗಂಭೀರ ಗಾಯ