ಮುಂಬೈ : ರಿಲಯನ್ಸ್ ರೀಟೇಲ್ ನ ಸ್ಮಾರ್ಟ್- ಸ್ಮಾರ್ಟ್ ಬಜಾರ್ ಗೆ ಬರುವಂಥ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂಬ ಅಂಶ ಇತ್ತೀಚಿನ ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಫಲಿತಾಂಶದಿಂದ ತಿಳಿದುಬಂದಿದೆ. ರಿಲಯನ್ಸ್ ರೀಟೇಲ್ ದಿನಸಿ ಮೂಲಕ ಬರುವ ಆದಾಯ ಪ್ರಮಾಣ ಶೇ 31ರಷ್ಟು ಹೆಚ್ಚಾಗಿದೆ. ಸ್ಮಾರ್ಟ್- ಸ್ಮಾರ್ಟ್ ಬಜಾರ್ ನಿಂದ ನಡೆದ ಫುಲ್ ಪೈಸಾ ವಸೂಲ್ ಸೇಲ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 21ರಷ್ಟು ಮಾರಾಟ ಹೆಚ್ಚಾಗಿದೆ. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಮಾರಾಟ ಬಹಳ ಹೆಚ್ಚಿರುತ್ತದೆ. ಆದರೆ ಹೋಳಿ ಹಬ್ಬದ ಮುಂಚಿನ ಮಾರಾಟವು ದೀಪಾವಳಿ ಸಂದರ್ಭವನ್ನು ಸಹ ಮೀರಿಸಿದೆ.
ಅಂದ ಹಾಗೆ, ರಿಲಯನ್ಸ್ ಇಂಡಸ್ಟ್ರೀಸ್ ನಿಂದ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಈಚೆಗಷ್ಟೇ ಹೊರಬಂದಿದ್ದು, ಕಂಪನಿಯ ರೀಟೇಲ್ ವ್ಯವಹಾರದ ಅಂಗವಾದ ರಿಲಯನ್ಸ್ ರೀಟೇಲ್ ಬೆಳವಣಿಗೆ ಬಗ್ಗೆ ಹೂಡಿಕೆದಾರರಲ್ಲಿ ಹಾಗೂ ಗ್ರಾಹಕರಲ್ಲಿ ಕುತೂಹಲ ಮೂಡಿಸುವಂಥ ಬೆಳವಣಿಗೆಗಳು ಕಂಡುಬಂದಿವೆ. ಅವುಗಳ ಅಂಕಿ- ಅಂಶಗಳನ್ನು ನಿಮ್ಮೆದುರು ಇಡಲಾಗುತ್ತಿದೆ. ರಿಲಯನ್ಸ್ ರೀಟೇಲ್ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆದ ಜಿಯೋಮಾರ್ಟ್ ತನ್ನ ಮಾರ್ಕೆಟ್ ಪ್ಲೇಸ್ ಕೊಡುಗೆಗಳನ್ನು ವಿಸ್ತರಿಸಿದ್ದು, ಕಳೆದ ಒಂದು ವರ್ಷದಲ್ಲಿ ಮಾರಾಟಗಾರರ ನೆಲೆ ಶೇ 94ರಷ್ಟು ಹೆಚ್ಚಾಗಿದೆ.
ದಿನಸಿ ವಿಭಾಗದಲ್ಲಿ ಆರ್ಡರ್ ಮೌಲ್ಯವು ಬಹಳ ಆರೋಗ್ಯಪೂರ್ಣವಾಗಿ ಹೆಚ್ಚಾಗಿದೆ. ಕ್ಯಾಟಲಾಗ್ (ಲಭ್ಯ ಇರುವ ವಸ್ತುಗಳ ಪಟ್ಟಿ) ವಿಸ್ತರಣೆಯು ಮುಂದುವರಿದಿದ್ದು, ಇ-ಕಾಮರ್ಸ್ ಪ್ಲಾಟ್ ಫಾರ್ಮ್ ತಿಳಿಸಿರುವಂತೆ, ವರ್ಷದಿಂದ ವರ್ಷಕ್ಕೆ ಆಯ್ಕೆಗಳ ಸಂಖ್ಯೆಯಲ್ಲಿ ಶೇಕಡಾ 32ರಷ್ಟು ಹೆಚ್ಚಾಗಿದೆ. ಸರಾಸರಿ ಆರ್ಡರ್ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇಕಡಾ 30ರಷ್ಟು ಹೆಚ್ಚಾಗಿದ್ದು, ಪ್ರತಿ ಆರ್ಡರ್ ಗೆ ಸರಾಸರಿ ಯೂನಿಟ್ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡಾ 37ರಷ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್, ದಿನಸಿ, ಫ್ಯಾಷನ್ ಈ ವಿಭಾಗದಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಾಗಿದೆ. ಇನ್ನು ಖರೀದಿ ಆಯ್ಕೆ ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ.
‘ಹೋಲಿ ರೆಡಿ’ ಹಾಗೂ ‘ರಿಪಬ್ಲಿಕ್ ಡೇ’ ಇಂಥ ಸಂದರ್ಭದಲ್ಲಿ ಗ್ರಾಹಕರು ಹೆಚ್ಚು ಸಮಯ ಭಾಗಿದ್ದು, ಸೆಷನ್ ಗಳು ಕೂಡ ಜಾಸ್ತಿಯಿದೆ ಮತ್ತು ಗ್ರಾಸ್ ಮರ್ಕಂಡೈಸ್ ವ್ಯಾಲ್ಯೂ ಹೆಚ್ಚಿದೆ. ಖರೀದಿ ಅನುಭವವನ್ನು ಉತ್ತಮಗೊಳಿಸುವುದಕ್ಕಾಗಿ “ಬೈ ಎಗೇಯ್ನ್” ಎಂಬ ಆಯ್ಕೆ ನೀಡಲಾಗಿದ್ದು, ಉತ್ಪನ್ನಗಳಿಗೆ ಗ್ರಾಹಕರು ರೇಟಿಂಗ್ ಸಹ ನೀಡಬಹುದು.
ರಿಲಯನ್ಸ್ ರೀಟೇಲ್ ದಿನಸಿಯ ಹೊಸ ವಾಣಿಜ್ಯ ಸೆಗ್ಮೆಂಟ್ ಗಮನಾರ್ಹವಾದ ಬೆಳವಣಿಗೆಯನ್ನು ದಾಖಲಿಸಿದೆ. ಮೆಟ್ರೋ ಕಿರಾಣಾ ಉತ್ಸವದಂಥ ಉಪಕ್ರಮಗಳು ಇದಕ್ಕೆ ಕೊಡುಗೆ ನೀಡಿವೆ. ಹೋಟೆಲ್-ರೆಸ್ಟೋರೆಂಟ್-ಕೆಫೆ ಈ ಸೆಗ್ಮೆಂಟ್ ನಲ್ಲಿ ಮಾಡಿಕೊಂಡ ಸಾಂಸ್ಥಿಕ ಸಹಭಾಗಿತ್ವವು ವೈವಿಧ್ಯಮಯ ಆದಾಯ ಮೂಲದ ಹರಿವಿಗೆ ಕಾರಣವಾಗಿವೆ.
ರಿಲಯನ್ಸ್ ರೀಟೇಲ್ ಫಲಿತಾಂಶ ಘೋಷಣೆ ವೇಳೆಯೇ ಕಂಪನಿಯ ಸಿಎಫ್ಒ ಆದ ದಿನೇಶ್ ತಲುಜಾ ಅವರು ಗಮನ ಸೆಳೆದ ಅಂಶವೊಂದನ್ನು ಇಲ್ಲಿ ಸ್ಮರಿಸಬೇಕು. ದೇಶದಲ್ಲಿ ನಾವು ತುಂಬ ಆಳವಾಗಿ ಪ್ರಾದೇಶಿಕವಾದ ಮಳಿಗೆಗಳ ಜಾಲವನ್ನು ಕಟ್ಟುತ್ತಿದ್ದೇವೆ ಎಂದು ಹೇಳಿದರು. ರೀಟೇಲ್ ವಿಭಾಗದಲ್ಲಿ ರಿಲಯನ್ಸ್ ಗಟ್ಟಿ ಹೆಜ್ಜೆಗಳನ್ನು ಈ ಮಾತುಗಳು ಪ್ರತಿಬಿಂಬಿಸುತ್ತವೆ.
ರಿಲಯನ್ಸ್ ರೀಟೇಲ್ ನಾಲ್ಕನೇ ತ್ರೈಮಾಸಿಕದಲ್ಲಿ 2,698 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಶೇ 11.7ರಷ್ಟು ಹೆಚ್ಚಾಗಿದೆ. 2020ನೇ ಇಸವಿಯಲ್ಲಿ ರಿಲಯನ್ಸ್ ರೀಟೇಲ್ ನ ಇ-ಟೇಲ್ ಅಂಗವಾಗಿ ಜಿಯೋಮಾರ್ಟ್ ಅಸ್ತಿತ್ವಕ್ಕೆ ಬಂತು, ಇದೀಗ ಭಾರತದ ದೇಶೀಯ ಅತಿದೊಡ್ಡ ಇ-ಮಾರ್ಕೆಟ್ ಪ್ಲೇಸ್ ಗಳಲ್ಲಿ ಒಂದು ಎನಿಸಿಕೊಂಡಿದೆ.
‘ಕೊಟಕ್ ಮಹೀಂದ್ರಾ ಬ್ಯಾಂಕ್’ಗೆ ‘ಹೊಸ ಕ್ರೆಡಿಟ್ ಕಾರ್ಡ್’ ನೀಡದಂತೆ ‘RBI ನಿರ್ಬಂಧ’
‘ನಾನು ಆ ರೀತಿ ಹೇಳಿಲ್ಲ’ : ಸಂಪತ್ತಿನ ಮರುಹಂಚಿಕೆ ವಿವಾದದ ಕುರಿತು ‘ರಾಹುಲ್ ಗಾಂಧಿ’ ಸ್ಪಷ್ಟನೆ