ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು,ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಖಾನಪುರ ಕೆರೆಯಲ್ಲಿ ಬಿಸಿಲಿನ ತಾಪದಿಂದ ಕೆರೆಗೆ ಈಜಲು ಹೋದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಖಾನಪುರ ಗ್ರಾಮದ ಮನೋಜ್ ದೋರಿ (12), ನಗನೂರು ಗ್ರಾಮದ ಹಯ್ಯಾಳಪ್ಪ ಕಾಮನಹಳ್ಳಿ (12) ಹಾಗೂ ಶರಣಬಸವ ನಾಟೇಕಾರ (12) ಎಂದು ಗುರುತಿಸಲಾಗಿದೆ.