ಬೆಂಗಳೂರು : ಚುನಾವಣೆ ಬಂದಾಗಲೇ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ನೆನಪು ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಪ್ರಧಾನಿ ಮೋದಿಗೆ ಕರ್ನಾಟಕ ನೆನಪು ಆಗುತ್ತದೆ. ಭೀಕರ ಬರಗಾಲ ಬಂದಾಗಲೂ ಈ ಬಾರಿ ಮೋದಿ ಕರ್ನಾಟಕಕ್ಕೆ ಬರಲಿಲ್ಲ. ಹೀಗಾಗಿ ಗೋ ಬ್ಯಾಕ್ ಮೋದಿ, ಗೋ ಬ್ಯಾಕ್ ಅಮಿತ್ ಶಾ ಅಂತ ಹೇಳಿದ್ದೇವು. ಇಂದು ರಾಜ್ಯಕ್ಕೆ ಅಮಿತ್ ಶಾ ಬರುತ್ತಿದ್ದಾರೆ. ರಾಜ್ಯಕ್ಕೆ ೧೮, ೧೭೨ ಕೋಟಿ ರೂ. ಅನುದಾನ ಕೊಟ್ಟು ನಂತರ ಬನ್ನಿ. ಮೋದಿ ಹಾಗೂ ಅಮಿತ್ ಶಾಗೆ ಕರ್ನಾಟಕದಲ್ಲಿ ಮತ ಕೇಳುವ ಯಾವುದೇ ಹಕ್ಕು ಇಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಬರ ಪರಿಹಾರ ಬಿಡುಗಡೆ ಮಾಡದಂತ ಆಸ್ತ್ರವನ್ನ ಕಾಂಗ್ರೆಸ್ ನಾಯಕರು ಬಳಿಸಿಕೊಂಡು ಧರಣಿ, ಪ್ರತಿಭಟನೆ ಇಳಿದಿದ್ದಾರೆ. ಇಂದು ವಿಧಾನಸೌಧದ ಬಳಿ ಇರುವಂತ ಗಾಂಧಿ ಪ್ರತಿಮೆಯ ಬಳಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಸಿಎಂ ಸಿದ್ಧರಾಮಯ್ಯ, ಸಚಿವರು, ಶಾಸಕರು, ಎಂಎಲ್ಸಿಗಳು ಸೇರಿ ಪ್ರತಿಭಟನೆ ಕೈಗೊಂಡಿದ್ದಾರೆ.