ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಂಗಳೂರಲ್ಲಿ ಲೋಕಸಭಾ ಚನಾವಣೆ ಹಿನ್ನಲೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮತಬೇಟೆಯಲ್ಲಿ ತೊಡಗಲಿದ್ದಾರೆ.
ಬೆಂಗಳೂರಿಗೆ ರಾತ್ರಿ 7.35ಕ್ಕೆ ಹೆಚ್ಎಎಲ್ ಏರ್ ಪೋರ್ಟ್ ಗೆ ಆಗಮಿಸಲಿರುವಂತ ಅವರು, ರಸ್ತೆ ಮಾರ್ಗದ ಮೂಲಕ ರೋಡ್ ಶೋಗೆ ತೆರಳಲಿದ್ದಾರೆ. ರಾತ್ರಿ 7.50ಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೊಮ್ಮನಹಳ್ಳಿ ಸರ್ಕಲ್ ಬಳಿ ವಿವೇಕಾನಂದ ವೃತ್ತದಿಂದ ಆರಂಭವಾಗಲಿರುವ ರೋಡ್ ಶೋ ರಾತ್ರಿ 8.45ಕ್ಕೆ ಸೆಂಟ್ ಫ್ರಾನ್ಸಿಸ್ ಸ್ಕೂಲ್ ಬಳಿಯಲ್ಲಿ ಅಂತ್ಯವಾಗಲಿದೆ.
ಇಂದು ಬೆಂಗಳೂರಿನಲ್ಲಿನ ಲೋಕಸಭಾ ಚುನಾವಣಾ ಪ್ರಚಾರದ ರೋಡ್ ಶೋ ಮುಗಿದ ಬಳಿಕ, ಅಮಿತ್ ಶಾ ಅವರು ಕೇರಳದ ಕೊಚ್ಚಿನ್ ಗೆ ಪ್ರಯಾಣ ಬೆಳೆಸಲಿದ್ದಾರೆ.
ಇಂದು ‘ಬೆಂಗಳೂರು ಕರಗ’ ಮಹೋತ್ಸವ: ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ
ಅಶ್ಲೀಲ ವಿಡಿಯೋ ವೈರಲ್ ಮಾಡಿದ ಗೆಳೆಯ : ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕಿ ಆತ್ಮಹತ್ಯೆ!