ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ ನೇಹಾ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಅಲ್ಲದೇ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೂ ಆದೇಶಿಸಲಾಗಿದೆ. ಈ ಘಟನೆ ಮಾಸೋ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಹಿಂದೂ ಯುವತಿಯ ಮೇಲೆ ಪ್ರೀತಿ ನಿರಾಕರಿಸಿದ ಕಾರಣ ಮುಸ್ಲೀಂ ಯುವ ಹಲ್ಲೆ ಮಾಡಿರೋದಾಗಿ ತಿಳಿದು ಬಂದಿದೆ.
ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನೇಹಾ ಹತ್ಯೆ ಮಾಸೋ ಮುನ್ನವೇ ಅದೇ ಮಾದರಿಯಲ್ಲೇ ಹಿಂದೂ ಯುವತಿ ಮೇಲೆ ಮುಸ್ಲೀಂ ಯುವಕನಿಂದ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ.
ಹುಬ್ಬಳ್ಳಿಯ ಕೇಶ್ವಾಪುರ ಟ್ರಾಫಿಕ್ ಪೊಲೀಸ್ ಠಾಣೆ ಎದುರೇ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಫ್ತಾಬ್ ಶಿರಹಟ್ಟಿ ಎಂಬಾತ ಪ್ರೀತಿಸಲು ನಿರಾಕರಸಿದಂತ ಹಿಂದೂ ಯುವತಿಯ ಮೇಲೆ ಹಲ್ಲೆ ಮಾಡಿರೋದಾಗಿ ತಿಳಿದು ಬಂದಿದೆ. ಹಲ್ಲೆ ಮಾಡಿದಂತ ಅಫ್ತಾಬ್ ಶಿರಹಟ್ಟಿಯನ್ನು ಸ್ಥಳೀಯ ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಬಂಧಿತ ಆರೋಪಿಗೆ 1 ವಾರ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಧಿಸಿದೆ.
ಇಂದು ಪರಿಷತ್ ಸದಸ್ಯ ‘ಕೆ.ಪಿ ನಂಜುಂಡಿ’ ಬಿಜೆಪಿಗೆ ಗುಡ್ ಬೈ: ‘ಕಾಂಗ್ರೆಸ್ ಪಕ್ಷ’ ಸೇರ್ಪಡೆ
2024-25ರಲ್ಲಿ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ ಚಿಲ್ಲರೆ ಹಣದುಬ್ಬರ : `CMIE’ ವರದಿ